ಜಮೀರ್‌ಗೆ ಹಜ್ ಖಾತೆ ತಪ್ಪಿಸಲು ರೊಷನ್ ಬೇಗ್ ಪ್ರಯತ್ನಿಸಿದ್ದೇಕೆ?

First Published 19, Jun 2018, 4:35 PM IST
Haj Department Issue: Zameer Ahmed Khan VS R. Roshan Baig
Highlights

ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಸ್ವಪ್ರತಿಷ್ಠೆ ಸ್ಥಾಪನೆ ವಿಚಾರದಲ್ಲಿ ಜಟಾಪಟಿ ಮತ್ತಷ್ಟು ಹೆಚ್ಚಾಗಿದೆ. ಹಾಲಿ ಸಚಿವರ ಖಾತೆ ಕಸಿಯಲು ಕಾಂಗ್ರೆಸ್ ನಲ್ಲೇ ಪ್ರಯತ್ನ ಆರಂಭವಾಗಿದೆ. ಅದು ಹಜ್ ಖಾತೆಗಾಗಿ ಒಂದೇ ಪಕ್ಷದ ಇಬ್ಬರು ಮುಸ್ಲಿಂ ಮುಖಂಡರ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ. ಏನಿದು ಸುದ್ದಿ ವಿವರ ಮುಂದಿದೆ..

ಬೆಂಗಳೂರು [ಜೂನ್ 19] ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಸ್ವಪ್ರತಿಷ್ಠೆ ಸ್ಥಾಪನೆ ವಿಚಾರದಲ್ಲಿ ಜಟಾಪಟಿ ಮತ್ತಷ್ಟು ಹೆಚ್ಚಾಗಿದೆ.  ಹಾಲಿ ಸಚಿವರ ಖಾತೆ ಕಸಿಯಲು ಕಾಂಗ್ರೆಸ್ ನಲ್ಲೇ ಪ್ರಯತ್ನ ಆರಂಭವಾಗಿದೆ. ಅದು ಹಜ್ ಖಾತೆಗಾಗಿ ಒಂದೇ ಪಕ್ಷದ ಇಬ್ಬರು ಮುಸ್ಲಿಂ ಮುಖಂಡರ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ.

ಮಾಜಿ ಸಿರಂ ಸಿದ್ದರಾಮಯ್ಯ ಆಪ್ತ ಜಮೀರ್ ಅಹಮದ್ ಗೆ ನೀಡಿರುವ  ವಕ್ಫ್ ಜತೆ ಹಜ್ ಖಾತೆ ವಿಚಾರದಲ್ಲಿ ಜಟಾಪಟಿ ಆರಂಭವಾಗಿದ್ದು ವಕ್ಫ್ ಜತೆ ಹಜ್ ಖಾತೆ ಜಮೀರ್ ಹತ್ತಿರ ಇರುವುದು ಬೇಡ ಎಂದು ಇನ್ನೊಬ್ಬ ಮುಸ್ಲಿಂ ನಾಯಕ ರೋಷನ್ ಬೇಗ್ ಕೆಂಡಾಮಂಡಲವಾಗಿದ್ದಾರೆ.

ಡಿಸಿಎಂ ಡಾ.ಜಿ.ಪರಮೇಶ್ವರ ಮೇಲೆ ಒತ್ತಡ ಹೇರಿರುವ ಮಾಜಿ ಸಚಿವ ಆರ್. ರೋಷನ್ ಬೇಗ್ ಹಜ್ ಖಾತೆ ಜಮೀರ್ ರಿಂದ ವಾಪಸ್ ಹಿಂಪಡೆಯಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿಂದೆಯೂ ಕೂಡ ಹಜ್ ಖಾತೆಗಾಗಿ ರೋಷನ್ ಬೇಗ್ ಫೈಟ್ ಮಾಡಿದ್ದರು.  ಸಿದ್ದರಾಮಯ್ಯ ಸರ್ಕಾರದಲ್ಲಿ ತನ್ವೀರ್ ಸೇಠ್ ಗೆ ಕೊಟ್ಟಿದ್ದ ಹಜ್ ಖಾತೆಗಾಗಿ ಫೈಟ್ ಮಾಡಿ ಹಜ್ ಖಾತೆ ಪಡೆದುಕೊಂಡಿದ್ದರು.

ಯಾಕಾಗಿ ರೋಷನ್ ಬೇಗ್ ಹೋರಾಟ?  ಹಜ್ ಖಾತೆ ಮುಸ್ಲಿಂ ಧಾರ್ಮಿಕ ಕಾರ್ಯಕ್ರಮಗಳ ಜಾರಿ ಮಾಡುವ ಮಹತ್ವದ ಖಾತೆಯಾಗಿದ್ದು  ಮುಸ್ಲಿಂ ನಾಯಕ ಎಂದು ಬಿಂಬಿಸಿಕೊಳ್ಳಲು ನೆರವಾಗುತ್ತದೆ. ಜಮೀರ್ ಬಳಿ ಹಜ್ ಖಾತೆ ಇದ್ರೆ ಅವರು ಸಮುದಾಯವನ್ನು ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ ಎನ್ನುವ ಆತಂಕ ರೋಷನ್ ಬೇಗ್ ಅವರನ್ನು ಕಾಡಿದೆ. ಹಾಗಾಗಿ ಜಮೀರ್ ಬಳಿಯಿರುವ ಹಜ್ ಖಾತೆಯನ್ನು ಯಾವುದೇ ಕ್ಷಣದಲ್ಲಿ ಹಿಂದಕ್ಕೆ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.

loader