ಕೂದಲು ಕಳೆದುಕೊಂಡು ಕ್ಷಯಕಾಯರಾಗುವ ಕ್ಸಾನ್ಸರ್ ಪೀಡಿತರ ವಿಗ್ ನಿರ್ಮಾಣಕ್ಕೆ ಕೂದಲು ದಾನ ಮಾಡುವ ವಿಶಿಷ್ಟ ಸೇವೆಯನ್ನು ಮಂಗಳೂರಿನ ಕುಟುಂಬವೊಂದು ಮಾಡಿದೆ.

ಮಂಗಳೂರು (ಫೆ.21): ಕ್ಯಾನ್ಸರ್ ಎಂಬುದು ಮಾನವ ಕುಲಕ್ಕೆ ಮಹಾಮಾರಿ. ಕೀಮೋಥೆರಪಿ ಎಂಬ ಆ ನೋವನ್ನು ಸಹಿಸಿ ಕೊರಗುವ ದೇಹಕ್ಕೆ ಸಾಂತ್ವನ ನೀಡುವ ಒಂದು ಮಾದರಿ ಕಾರ್ಯವನ್ನು ಮಂಗಳೂರಿನ ಕುಟುಂಬವೊಂದು ಮಾಡಿದೆ.

ಕೂದಲು ಕಳೆದುಕೊಂಡು ಕ್ಷಯಕಾಯರಾಗುವ ಕ್ಸಾನ್ಸರ್ ಪೀಡಿತರ ವಿಗ್ ನಿರ್ಮಾಣಕ್ಕೆ ಕೂದಲು ದಾನ ಮಾಡುವ ವಿಶಿಷ್ಟ ಸೇವೆಯನ್ನು ಮಂಗಳೂರಿನ ಕುಟುಂಬವೊಂದು ಮಾಡಿದೆ.

ಅಶ್ವಿನಿ ಪ್ರಭು-ಶ್ರೀಲತಾ ಪ್ರಭು ದಂಪತಿ ತಮ್ಮ ಪುತ್ರ ಅರ್ನವ್ ಪ್ರಭುವಿನ ಚೌಲ ಕಾರ್ಯಕ್ರಮದಲ್ಲಿ ಸಂಪ್ರದಾಯವನ್ನೂ ಮೀರದೆ, 12 ಅಡಿ ಉದ್ದದ ಕೂದಲನ್ನು ಕ್ಯಾನ್ಸರ್ ಪೀಡಿತರಿಗೆ ದಾನ ಮಾಡಿದ್ದಾರೆ.