ಹಫೀಜ್ ಬಂಧನದ ನಂತರ ಜಮಾತ್-ಉದ್-ದವಾ ಹಾಗೂ ಸಯೀದ್ ಫಲಾಹ್-ಎ-ಇನ್'ಸಾನಿಯತ್ ಫೌಂಡೇಶನ್ ಕೇಂದ್ರಗಳು ಸ್ಥಗಿತಗೊಂಡಿದ್ದವು.
ಮುಂಬೈ ದಾಳಿಯ ರುವಾರಿ ಉಗ್ರ ಹಫೀಜ್ ಸಯ್ಯದ್ ನೇತೃತ್ವದ ಜಮಾತ್-ಉದ್-ದವಾ ಸಂಘಟನೆಗೆ ಈಗ ಹೊಸ ಹೆಸರು ನಾಮಕರಣಗೊಂಡಿದೆ. ಕಾಶ್ಮೀರ ಸ್ವಾತಂತ್ರ್ಯ ಚಳವಳಿಗಾಗಿ ನೂತನ ಹೆಸರಿಡಲಾಗಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಈತ ಮುಖ್ಯಸ್ಥನಾಗಿರುವ ಜಮಾತ್-ಉದ್-ದವಾ ಹಾಗೂ ಸಯೀದ್ ಫಲಾಹ್-ಎ-ಇನ್'ಸಾನಿಯತ್ ಫೌಂಡೇಶನ್ ಸಂಸ್ಥೆಗಳಿಗೆ ತಹ್ರೀಕ್ಆಜಾದಿ ಜಮ್ಮು ಅಂಡ್ ಕಾಶ್ಮೀರಿ(ಟಿಎಜೆಕೆ) ಎಂದು ಕೆಲ ದಿನಗಳ ಹಿಂದೆಯಷ್ಟೆ ಮರು ನಾಮಕರಣವಾಗಿದೆ ಎಂದು ಡೈಲಿ ಎಕ್ಸ್'ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಕೆಲ ದಿನಗಳ ಹಿಂದಷ್ಟೆ ಹಫೀಜ್ ಸಯ್ಯದ್'ನನ್ನು ಪಾಕ್'ನ ಲಾಹೋರ್'ನಲ್ಲಿ ಗೃಹಬಂಧನಕ್ಕಿಡಲಾಗಿತ್ತು.
ಹಫೀಜ್ ಬಂಧನದ ನಂತರ ಜಮಾತ್-ಉದ್-ದವಾ ಹಾಗೂ ಸಯೀದ್ ಫಲಾಹ್-ಎ-ಇನ್'ಸಾನಿಯತ್ ಫೌಂಡೇಶನ್ ಕೇಂದ್ರಗಳು ಸ್ಥಗಿತಗೊಂಡಿದ್ದವು. ಈಗ ಕಾಶ್ಮೀರ ಸ್ವಾತಂತ್ರಕ್ಕಾಗಿ ಇಸ್ಲಾಮಾಬಾದ್'ನಲ್ಲಿ ಮತ್ತೆ ಟಿಎಜೆಕೆ ಹೆಸರಿನಲ್ಲಿ ಪುನಾರಂಭವಾಗಿವೆ. 2008ರ ಮುಂಬೈನಲ್ಲಿ ಈತನ ಸಂಘಟನೆ ಜಮಾತ್-ಉದ್-ದವಾ ದಾಳಿ ನಡೆಸಿದ ಪರಿಣಾಮ 160 ಮಂದಿ ಮೃತಪಟ್ಟಿದ್ದರು.
