ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸೈಯದ್ ಸಂಘಟನೆ ಜಮ್ಮತ್-ಉದ್-ದವಾಯಿ 2018 ರ ಪಾಕಿಸ್ತಾನ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಸಂಘಟನೆಯ ಹಿರಿಯ ಮುಖಂಡ ಸ್ಪಷ್ಟಪಡಿಸಿದ್ದಾರೆ. ಈ ಸಂಘಟನೆ ಕಳೆದ ತಿಂಗಳು ಮಿಲಿ ಮುಸ್ಲೀಂ ಲೀಗ್’ನ್ನು ಸ್ಥಾಪನೆ ಮಾಡಿಕೊಂಡಿದೆ.

ಲಾಹೋರ್ (ಸೆ.18): ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸೈಯದ್ ಸಂಘಟನೆ ಜಮ್ಮತ್-ಉದ್-ದವಾಯಿ 2018 ರ ಪಾಕಿಸ್ತಾನ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಸಂಘಟನೆಯ ಹಿರಿಯ ಮುಖಂಡ ಸ್ಪಷ್ಟಪಡಿಸಿದ್ದಾರೆ. ಈ ಸಂಘಟನೆ ಕಳೆದ ತಿಂಗಳು ಮಿಲಿ ಮುಸ್ಲೀಂ ಲೀಗ್’ನ್ನು ಸ್ಥಾಪನೆ ಮಾಡಿಕೊಂಡಿದೆ.

ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಶರೀಫ್ ಪತ್ನಿ ಕುಲ್ಸೂಮ್ ವಿರುದ್ಧ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡ ಸೈಕ್ ಯಾಕೂಬ್ ಮಿಲಿ ಮುಸ್ಲೀಂ ಲೀಗ್’ನಿಂದ ಸ್ಪರ್ಧಿಸಲಿದ್ದಾರೆ. ಆದರೆ ಚುನಾವಣಾ ಆಯೋಗ ಮಿಲಿ ಮುಸ್ಲೀಂ ಲೀಗನ್ನು ಇನ್ನೂ ರಾಜಕೀಯ ಪಕ್ಷವಾಗಿ ನೊಂದಾಯಿಸಿಲ್ಲ.

ನಾವು ರಾಜಕೀಯಕ್ಕೆ ಪ್ರವೇಶಿಸಲಿದ್ದೇವೆ. ನಮ್ಮ ಶತ್ರು ದೇಶಗಳಾದ ಭಾರತ, ಅಮೆರಿಕಾ ಹಾಗೂ ಇಸ್ರೇಲ್ ವಿರುದ್ಧ ಪಾಕಿಸ್ತಾನವನ್ನು ಇನ್ನಷ್ಟು ಬಲಗೊಳಿಸಲಿದ್ದೇವೆ. ಇದು ನಮ್ಮ ಮೊದಲ ಚುನಾವಣೆಯಾಗಿದ್ದು ಜನರು ನಮ್ಮನ್ನು ಸ್ವಾಗತಿಸಿದ್ದಾರೆ ಎಂದು ಯಾಕೂಬ್ ಹೇಳಿದ್ದಾರೆ.

2014 ರಲ್ಲಿ ಅಮೆರಿಕಾ ಜಮ್ಮತ್-ಉದ್-ದವಾಯಿಯನ್ನು ಅಂತರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯೆಂದು ಘೋಷಿಸಿದೆ.