ಕೇರಳ ಲವ್ ಜಿಹಾದ್ ಪ್ರಕರಣದ ಆರೋಪಿಯಾಗಿರುವ ಹಾದಿಯಾಳ ಪತಿ ಶಫೀನ್ ಜಹಾನ್, ಆರೋಪಪಟ್ಟಿಯಲ್ಲಿ ಹೆಸರಿರುವ ಕೆಲವು ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಶಂಕಿತ ಉಗ್ರರೊಂದಿಗೆ ಸಂಪರ್ಕದಲ್ಲಿದ್ದ. ಭಾರತೀಯ ಮೂಲದ ಐಸಿಸ್ ಉಗ್ರರಾದ ಒಮರ್ ಅಲ್ ಹಿಂದಿ, ಮನ್ಸೀದ್ ಹಾಗೂ ಪಿ. ಸಫ್ವಾನ್ ಎಂಬುವರೊಂದಿಗೆ ಫೇಸ್‌ಬುಕ್ ಗ್ರೂಪ್ ಮತ್ತು ಮೆಸೇಜಿಂಗ್ ಆ್ಯಪ್ ಮೂಲಕ ಸಂಪರ್ಕದಲ್ಲಿದ್ದ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹೇಳಿದೆ.
ನವದೆಹಲಿ: ಕೇರಳ ಲವ್ ಜಿಹಾದ್ ಪ್ರಕರಣದ ಆರೋಪಿಯಾಗಿರುವ ಹಾದಿಯಾಳ ಪತಿ ಶಫೀನ್ ಜಹಾನ್, ಆರೋಪಪಟ್ಟಿಯಲ್ಲಿ ಹೆಸರಿರುವ ಕೆಲವು ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಶಂಕಿತ ಉಗ್ರರೊಂದಿಗೆ ಸಂಪರ್ಕದಲ್ಲಿದ್ದ. ಭಾರತೀಯ ಮೂಲದ ಐಸಿಸ್ ಉಗ್ರರಾದ ಒಮರ್ ಅಲ್ ಹಿಂದಿ, ಮನ್ಸೀದ್ ಹಾಗೂ ಪಿ. ಸಫ್ವಾನ್ ಎಂಬುವರೊಂದಿಗೆ ಫೇಸ್ಬುಕ್ ಗ್ರೂಪ್ ಮತ್ತು ಮೆಸೇಜಿಂಗ್ ಆ್ಯಪ್ ಮೂಲಕ ಸಂಪರ್ಕದಲ್ಲಿದ್ದ ಎಂದು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಹೇಳಿದೆ.
ಇವರು ಸಂಪರ್ಕದಲ್ಲಿದ್ದ ಫೇಸ್ಬುಕ್ ಸಮೂಹದಲ್ಲಿ ನಿಷೇಧದ ಭೀತಿಯಲ್ಲಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್’ಐ)ನ ರಾಜಕೀಯ ಅಂಗವಾಗಿರುವ ಎಸ್ಡಿಪಿಐ ಸದಸ್ಯರೂ ಇದ್ದರು. ಮನ್ಸೀದ್ ಹಾಗೂ ಆತನ ಎಸ್’ಡಿಪಿಐ ಸಹವರ್ತಿಗಳು ಹಿಂದು ಯುವತಿ ಹಾದಿಯಾ (ಅಖಿಲಾ) ಹಾಗೂ ಶಫೀನ್ ಜಹಾನ್ ಸತಿ-ಪತಿಗಳಾಗಲು ಕಾರಣರಾದರು ಎಂದು ಎನ್’ಐಎ ಆರೋಪಪಟ್ಟಿ ಹೇಳಿದೆ.
