ಮತ್ತೊಬ್ಬ ಪುತ್ರ ತೇಜ್ ಪ್ರತಾಪ್ ಯಾದವ್ ತಮ್ಮ ತಂದೆಯವರಿಗೆ ಜಾಮೀನು ದೊರೆಯುವ ವಿಶ್ವಾಸ ಹೊಂದಿದ್ದಾರೆ.
ನವದೆಹಲಿ(ಜ.06): ತಮ್ಮ ತಂದೆಗೆ ಜೈಲು ಶಿಕ್ಷೆ ವಿಧಿಸಿದ್ದಕ್ಕೆ ಲಾಲು ಪುತ್ರ ತೇಜಸ್ವಿ ಯಾದವ್ ಬಿಜೆಪಿ ವಿರುದ್ಧ ಕೆಂಡಕಾರಿದ್ದಾರೆ.
ಲಾಲು ಪ್ರಸಾದ್ ಯಾದವ್ ಅವರು ಬಿಜೆಪಿಯೊಂದಿಗೆ ಹೊಂದಾಣಿಗೆ ಮಾಡಿಕೊಂಡಿದ್ದರೆ ರಾಜ ಹರಿಶ್ಚಂದ್ರರಾಗಿರುತ್ತಿದ್ದರು. ಅಲ್ಲದೆ ಆಡಳಿತ ಪಕ್ಷಕ್ಕೆ ಅತೀ ನಂಬಿಕಸ್ಥ ಮನುಷ್ಯರಾಗಿ ಕಾಣಿಸುತ್ತಿದ್ದರು. ಲಾಲು ಅವರು ಜೈಲಿನಲ್ಲಿರುವಾಗಲು ಬಿಜೆಪಿ ಹಾಗೂ ಆರ್'ಎಸ್'ಎಸ್ ಮಂದಿ ಭಯಗೊಂಡಿದ್ದಾರೆ. ಅವರ ಧ್ವನಿ ಅಡಗಿಸುವ ತಂತ್ರ ನಡೆದಿದೆ'ಎಂದ ಅವರು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ನಡೆಯನ್ನು ಖಂಡಿಸಿದರು.
ತೇಜಸ್ವಿ ಅವರು ಬಿಹಾರದ ಮಾಜಿ ಉಪ ಮುಖ್ಯಮಂತ್ರಿಯಾಗಿದ್ದು ಸಿಬಿಐ ನ್ಯಾಯಾಲಯದ ತೀರ್ಪಿನ ವಿರುದ್ಧ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ. ಮತ್ತೊಬ್ಬ ಪುತ್ರ ತೇಜ್ ಪ್ರತಾಪ್ ಯಾದವ್ ತಮ್ಮ ತಂದೆಯವರಿಗೆ ಜಾಮೀನು ದೊರೆಯುವ ವಿಶ್ವಾಸ ಹೊಂದಿದ್ದಾರೆ.
ಮೇವು ಹಗರಣದ ಆರೋಪದಲ್ಲಿ ತಪ್ಪಿತಸ್ಥರಾದ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಒಳಗೊಂಡು 8 ಮಂದಿಗೆ ಸಿಬಿಐ ವಿಶೇಷ ನ್ಯಾಯಾಲಯ 3.5 ವರ್ಷ ಸೆರೆವಾಸ ಹಾಗೂ 5 ಲಕ್ಷ ರೂ. ದಂಡ ವಿಧಿಸಿದೆ.
