ಆಧಾರ್  ಕಾರ್ಡ್ ಎಲ್ಲದಕ್ಕೂ ಕಡ್ಡಾಯ ಮಾಡಬೇಕು ಎಂದು ಕೇಂದ್ರ ಸರಕಾರ ಒಂದು ಕಡೆ ಹಠಕ್ಕೆ ಬಿದ್ದಿದ್ದರೆ ಇದೇ ಆಧಾರ್ ವಿಚಾರ ಇಟ್ಟುಕೊಂಡು ಪುಣ್ಯಾತ್ಮನೊಬ್ಬ ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕಿದ್ದಾನೆ.  ಸುಮ್ಮನೆ ಏನು ಸವಾಲು ಹಾಕಿಲ್ಲ.. ಏನಿದು ಕತೆ?

ನವದೆಹಲಿ[ಜು.29] ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಅಧ್ಯಕ್ಷ ಆರ್.ಎಸ್.ಶರ್ಮಾ ಆಧಾರ್​ ಹ್ಯಾಕ್​ ಮಾಡಿದ್ದ ಫ್ರೆಂಚ್​ ಹ್ಯಾಕರ್​ ಇದೀಗ ಪ್ರಧಾನಿ ಮೋದಿಗೂ ಚಾಲೆಂಜ್​ ಮಾಡಿದ್ದು, ಧೈರ್ಯವಿದ್ದರೆ ನಿಮ್ಮ ಆಧಾರ್​ ಸಂಖ್ಯೆನ್ನು ಬಹಿರಂಗ ಪಡಿಸುವಂತೆ ಸವಾಲೆಸೆದಿದ್ದಾನೆ.

ಟ್ರಾಯ್ ಅಧ್ಯಕ್ಷ ಆರ್.ಎಸ್.ಶರ್ಮಾ ತಮ್ಮ ಆಧಾರ್​ ಹ್ಯಾಕ್​ ಮಾಡುವಂತೆ ಹೇಳಿ ಪೂರ್ಣ ಆಧಾರ್ ನಂಬರ್ ಅನ್ನು ಟ್ವಿಟರ್​ನಲ್ಲು ಪೋಸ್ಟ್​ ಮಾಡಿಕೊಂಡಿದ್ದರು. ಕೆಲವೇ ಕ್ಷಣಗಳಲ್ಲಿ ಫ್ರೆಂಚ್​ ಭದ್ರತಾ ತಜ್ಞ ಎಲೈಟ್​ ಆ್ಯಂಡ್ರಸನ್​, ಶರ್ಮಾ ಖಾತೆಯನ್ನು ಹ್ಯಾಕ್​ ಮಾಡಿ ಅವರ ಪಾನ್​ ನಂಬರ್​, ಫೋನ್​ ನಂಬರ್​, ಇಮೇಲ್​ ಐಡಿ, ಖಾಸಗಿ ಮೊಬೈಲ್​ ನಂಬರ್​, ವಾಟ್ಸಪ್​ ಪ್ರೊಫೈಲ್​ ಚಿತ್ರ ಎಲ್ಲವನ್ನೂ ಬಹಿರಂಗ ಮಾಡಿದ್ದ. ಇದಾದ ಮೇಲೆ ಶರ್ಮಾ ಟ್ರೋಲ್ ಗೂ ಗುರಿಯಾಗಿದ್ದರು.

ಕಾರ್ಯಕರ್ತರು ಮೈಮರೆತರೆ ವಾಜಪೇಯಿಗೆ ಆದ ಗತಿ ಮೋದಿಗೂ ಬರಲಿದೆ

ಆದರೆ ಇದೀಗ ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕಿರುವ ಹ್ಯಾಕರ್ ನಿಮ್ಮ ಆಧಾರ್ ಸಂಖ್ಯೆ ಬಹಿರಂಗ ಮಾಡಿ. ಎಲ್ಲ ವಿವರಗಳನ್ನು ಚಿಚ್ಚಿಡುತ್ತೇನೆ ಎಂದು ಟ್ವೀಟ್ ಮಾಡಿದ್ದಾನೆ. ಈ ಟ್ವೀಟ್ ಗೆ ಪರ ವಿರೋಧದ ಅಭಿಪ್ರಾಯಗಳು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿದೆ.

Scroll to load tweet…