ಎರಡು ವಾರಗಳ ಹಿಂದೆಯೇ ಬ್ಯಾಂಕ್‌ಗಳ ನೆಟ್‌ವರ್ಕ್‌ನಲ್ಲಿ ಮಾಲ್‌ವೇರ್‌ ವೈರಸ್‌ ಹರಡಲು ಆರಂಭವಾಗಿದ್ದಾಗಲೂ ಸಿಇಆರ್‌ಟಿ, ಬ್ಯಾಂಕ್‌ಗಳಿಗೆ ಸಂದೇಶ ರವಾನಿಸಿತ್ತು. ಅಲ್ಲದೆ ಜುಲೈ ಮತ್ತು ಆಗಸ್ಟ್‌ನಲ್ಲೂ ಸಂಭವನೀಯ ದಾಳಿ ಬಗ್ಗೆ ಅಲರ್ಟ್‌ ಮಾಡಿತ್ತು ಅಂತ ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿ(ಅ.23): ದೇಶದಲ್ಲಿ ಸುಮಾರು 32 ಲಕ್ಷಕ್ಕೂ ಹೆಚ್ಚು ಡೆಬಿಟ್‌ ಕಾರ್ಡ್‌ಗಳ ಮೇಲೆ ನಡೆದಿರುವ ಸೈಬರ್‌ ದಾಳಿ ಪಾಕಿಸ್ತಾನ ಮೂಲದ ಹ್ಯಾಕರ್‌ಗಳ ಕೃತ್ಯವಿರುವ ಶಂಕೆ ಬಲವಾಗತೊಡಗಿದೆ.

ದಾಳಿಗಳ ಬಗ್ಗೆ ನಿಗಾ ವಹಿಸುವ, ಸರಕಾರದ ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಮ್‌ (ಸಿಇಆರ್‌ಟಿ-ಇನ್‌) ಸೈಬರ್‌ ದಾಳಿಯ ಬಗ್ಗೆ 2 ವಾರಗಳ ಹಿಂದೆಯೇ ಬ್ಯಾಂಕ್‌ಗಳನ್ನು ಎಚ್ಚರಿಸಿತ್ತು ಎಂಬ ಸಂಗತಿ ಈಗ ಬಯಲಾಗಿದೆ.

ಎರಡು ವಾರಗಳ ಹಿಂದೆಯೇ ಬ್ಯಾಂಕ್‌ಗಳ ನೆಟ್‌ವರ್ಕ್‌ನಲ್ಲಿ ಮಾಲ್‌ವೇರ್‌ ವೈರಸ್‌ ಹರಡಲು ಆರಂಭವಾಗಿದ್ದಾಗಲೂ ಸಿಇಆರ್‌ಟಿ, ಬ್ಯಾಂಕ್‌ಗಳಿಗೆ ಸಂದೇಶ ರವಾನಿಸಿತ್ತು. ಅಲ್ಲದೆ ಜುಲೈ ಮತ್ತು ಆಗಸ್ಟ್‌ನಲ್ಲೂ ಸಂಭವನೀಯ ದಾಳಿ ಬಗ್ಗೆ ಅಲರ್ಟ್‌ ಮಾಡಿತ್ತು ಅಂತ ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ಟೋಬರ್‌ 7ರಂದು '' ಪಾಕಿಸ್ತಾನ ಮೂಲದಿಂದ ಸೈಬರ್‌ ದಾಳಿಯ ಸಾಧ್ಯತೆ ಇದೆ'' ಎಂದು ಸಿಇಆರ್‌ಟಿ ಎಚ್ಚರಿಕೆಯ ಸಂದೇಶವನ್ನು ಬ್ಯಾಂಕ್‌ಗಳಿಗೆ ಕಳಿಸಿತ್ತು. ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಭಾರತ ಉಗ್ರರ ವಿರುದ್ಧ ನಡೆಸಿದ್ದ ಸರ್ಜಿಕಲ್‌ ದಾಳಿಗೆ ಪ್ರತಿಯಾಗಿ, ಸೈಬರ್‌ ದಾಳಿಯಾಗುವ ಸಾಧ್ಯತೆ ಇದೆ ಎಂದಿತ್ತು. ಸುಮಾರು 32 ಲಕ್ಷ ಡೆಬಿಟ್‌ ಕಾರ್ಡ್‌ಗಳಿಗೆ ಹ್ಯಾಕರ್‌ಗಳು ಕನ್ನ ಹಾಕಿದ್ದರೂ, ಅಕ್ರಮವಾಗಿ ಹಿಂತೆಗೆದುಕೊಂಡಿರುವ ಮೊತ್ತ 1.3 ಕೋಟಿ ರೂ.ಗಳ ಕಡಿಮೆ ಮೊತ್ತವಾಗಿತ್ತು. ತಕ್ಷಣವೇ ಎಚ್ಚೆತ್ತ ಕೇಂದ್ರ ಸರಕಾರ ಮತ್ತು ಆರ್‌ಬಿಐ ಬ್ಯಾಂಕ್‌ಗಳಿಗೆ ತನಿಖೆಗೆ ಆದೇಶಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿತ್ತು. ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಯಸ್‌ ಬ್ಯಾಂಕ್‌, ಎಕ್ಸಿಸ್‌ ಬ್ಯಾಂಕ್‌ನ ಡೆಬಿಟ್‌ಕಾರ್ಡ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಸೈಬರ್‌ ದಾಳಿಗೆ ಸಿಲುಕಿತ್ತು.