Asianet Suvarna News Asianet Suvarna News

ಎಚ್-1ಬಿ ವೀಸಾ: ನಾಸ್ಕಾಂ ಜೊತೆ ಮಾತುಕತೆಗೆ ಕೇಂದ್ರ ಭರವಸೆ

ಅಮೆರಿಕಾ ಸಂಸತ್ತಿನಲ್ಲಿ ಎಚ್-1ಬಿ ವೀಸಾ ಸಂಬಂಧಿಸಿದಂತೆ ಮಂಡನೆಯಾದ ಮಸೂದೆಗೆ ಭಾರತ ಕಳವಳ ವ್ಯಕ್ತಪಡಿಸಿದೆ. ಈ ಮಸೂದೆಯಿಂದ ಅಮೆರಿಕಾದಲ್ಲಿ ಕೆಲಸ ಮಾಡುವ ಟೆಕ್ಕಿಗಳಿಗೆ ತೊಂದರೆಯಾಗಲಿದ್ದು ಸಂಸತ್ ಅಧಿವೇಶನಸ ಬಳಿಕ ನಾಸ್ಕಾಂ ಜೊತೆ ಮಾತುಕತೆ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ.

H1B visa issue Will Impact in India Will Speak to US says centre

ನವದೆಹಲಿ (ಫೆ.06): ಅಮೆರಿಕಾ ಸಂಸತ್ತಿನಲ್ಲಿ ಎಚ್-1ಬಿ ವೀಸಾ ಸಂಬಂಧಿಸಿದಂತೆ ಮಂಡನೆಯಾದ ಮಸೂದೆಗೆ ಭಾರತ ಕಳವಳ ವ್ಯಕ್ತಪಡಿಸಿದೆ. ಈ ಮಸೂದೆಯಿಂದ ಅಮೆರಿಕಾದಲ್ಲಿ ಕೆಲಸ ಮಾಡುವ ಟೆಕ್ಕಿಗಳಿಗೆ ತೊಂದರೆಯಾಗಲಿದ್ದು ಸಂಸತ್ ಅಧಿವೇಶನಸ ಬಳಿಕ ನಾಸ್ಕಾಂ ಜೊತೆ ಮಾತುಕತೆ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ.

ಎಚ್-1ಬಿ ವೀಸಾ ಮಸೂದೆಯಿಂದ ಕಡಿಮೆ ವೇತನಕ್ಕೆ ದುಡಿಯುವ ಹೆಚ್ಚಿನ ಅರ್ಹತೆ ಹೊಂದಿದ ಕೆಲಸಗಾರರ ಮೇಲೆ ಆರ್ಥಿಕವಾಗಿ ಪ್ರತಿಕೂಲ ಪರಿಣಾಮ ಬೀರಲಿದೆ. ಸಂಸತ್ತಿನ ಅನುಮೋದನೆ ಸಿಗುವವರೆಗೆ ನಾವು ಕಾಯಬೇಕಾಗಬಹುದು. ಆಗ ಕೆಲವೊಂದು ಅಂಶಗಳನ್ನು ಸೇರಿಸಲಾಗುತ್ತದೆ. ಹಾಗಾಗಿ ಈ ಕೂಡಲೇ ಪ್ರತಿಕ್ರಿಯಿಸುವುದು ಅಷ್ಟು ಸೂಕ್ತವಲ್ಲ. ಎಚ್-1ಬಿ ವೀಸಾಗೆ ಸಂಬಂಧಿಸಿದಂತೆ ಬೆಳವಣಿಗೆಯ ಬಗ್ಗೆ ವಿದೇಶಾಂಗ ಸಚಿವಾಲಯವು ಗಮನವಿಡುತ್ತದೆ. ಅಲ್ಲಿನ ರಾಯಭಾರದ ಜೊತೆ ನಾವು ಸಂಪರ್ಕದಲ್ಲಿರುತ್ತೇವೆ ಎಂದು ಕೇಂದ್ರ ರಾಜ್ಯ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ.

  

Follow Us:
Download App:
  • android
  • ios