ಇನ್ನೂ ವಿದೇಶಿ ಉದ್ಯೋಗಿಗಳ ಮೇಲೆ ವಕ್ರದೃಷ್ಟಿ ಬೀರಿರುವ ಟ್ರಂಪ್, ಹೊಸ ಬಿಲ್ ಮಂಡಿಸುವ ಮೂಲಕ ಭಾರತೀಯ ಐಟಿ ಉದ್ಯೋಗಿಗಳಿಗೆ ಭಾರೀ ಹೊಡೆತ ನೀಡಿದ್ದಾರೆ. ಮೂಲ ಅಮೆರಿಕನ್ನರಿಗೆ ಉದ್ಯೋಗ ದೊರಕಿಸಿಕೊಡುವ ಸಿದ್ಧತೆ ನಡೆಸಿರುವ ಟ್ರಂಪ್, ಭಾರತ ಸೇರಿದಂತೆ ವಿದೇಶಿ ಉದ್ಯೋಗಿಗಳ ಮೇಲೆ ನಿರ್ಬಂಧ ಹೇರಲು ಮುಂದಾಗಿದ್ದಾರೆ. ಇದರಿಂದಾಗಿ ಅಮೆರಿಕ ಎಚ್ 1 ಬಿ ವೀಸಾ ಪಡೆಯಲು ಕಠಿಣ ನಿಯಮ ಜಾರಿಗೊಳಿಸಿದೆ.
ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ನಿಯಮ ಜಾರಿ ಮಾಡಿದ್ದಾರೆ. ಅಮೆರಿಕ ಸಂಸತ್ನಲ್ಲಿ H1B ವೀಸಾ ತಿದ್ದುಪಡಿ ಬಿಲ್ ಮಂಡನೆಯಾಗಿದೆ. ಅಮೆರಿಕದ ವೀಸಾ ಪಡೆಯಲು ಕಠಿಣ ನಿಯಮಗಳನ್ನು ಜಾರಿ ಮಾಡಿದ್ದು, ಅಮೆರಿಕ ವೀಸಾ ಪಡೆಯಲು 1 ಲಕ್ಷ30 ಸಾವಿರ ಡಾಲರ್ ನಿಗದಿ ಪಡಿಸಲಾಗಿದೆ. 1 ಲಕ್ಷ30 ಸಾವಿರ ಡಾಲರ್ ವೇತನ ಇರುವವರಿಗೆ ಮಾತ್ರ ವೀಸಾ ಸಿಗಲಿದ್ದು, ವರ್ಷಕ್ಕೆ 88 ಲಕ್ಷ ವೇತನ ಇದ್ದವರಿಗಷ್ಟೇ ಅಮೆರಿಕ ವೀಸಾ ಕೈ ಸೇರಲಿದೆ. ಅಮೆರಿಕದ ಜನಪ್ರತಿನಿಧಿಗಳ ಸಭೆಯಲ್ಲಿ ಈ ಹೊಸ ಮಸೂದೆ ಮಂಡನೆಯಾಗಿದೆ. ಅಮೆರಿಕದಲ್ಲಿ ಕೆಲಸಕ್ಕೆ ತೆರಳುವವರಿಗೆ ಮತ್ತಷ್ಟು ಕಠಿಣ ನಿಯಮಗಳು ಎದುರಾಗುವ ಸಾಧ್ಯತೆಗಳಿವೆ. ಅಷ್ಟೇ ಅಲ್ಲದೇ ಭಾರತದ IT ಕಂಪನಿಗಳ ಮೇಲೆ ಈ ಬಿಲ್ ಬಾರೀ ಪರಿಣಾಮ ಬೀರಲಿದೆ. ಇನ್ಮುಂದೆ ಕಡಿಮೆ ವೇತನ ಪಡೆಯುವವರಿಗೆ ಅಮೆರಿಕ ವೀಸಾ ಇಲ್ಲದಂತಾಗಿದೆ.
ಇನ್ನೂ ವಿದೇಶಿ ಉದ್ಯೋಗಿಗಳ ಮೇಲೆ ವಕ್ರದೃಷ್ಟಿ ಬೀರಿರುವ ಟ್ರಂಪ್, ಹೊಸ ಬಿಲ್ ಮಂಡಿಸುವ ಮೂಲಕ ಭಾರತೀಯ ಐಟಿ ಉದ್ಯೋಗಿಗಳಿಗೆ ಭಾರೀ ಹೊಡೆತ ನೀಡಿದ್ದಾರೆ. ಮೂಲ ಅಮೆರಿಕನ್ನರಿಗೆ ಉದ್ಯೋಗ ದೊರಕಿಸಿಕೊಡುವ ಸಿದ್ಧತೆ ನಡೆಸಿರುವ ಟ್ರಂಪ್, ಭಾರತ ಸೇರಿದಂತೆ ವಿದೇಶಿ ಉದ್ಯೋಗಿಗಳ ಮೇಲೆ ನಿರ್ಬಂಧ ಹೇರಲು ಮುಂದಾಗಿದ್ದಾರೆ. ಇದರಿಂದಾಗಿ ಅಮೆರಿಕ ಎಚ್ 1 ಬಿ ವೀಸಾ ಪಡೆಯಲು ಕಠಿಣ ನಿಯಮ ಜಾರಿಗೊಳಿಸಿದೆ. ಅಮೆರಿಕದ ಎಚ್ 1 ಬಿ ವೀಸಾದ ಹೊಸ ನೀತಿಯಿಂದಾಗಿ ಭಾರತೀಯ ಐಟಿ ದಿಗ್ಗಜ ಕಂಪನಿಗಳಾದ ಇನ್ಫೋಸಿಸ್, ಟಿಸಿಎಸ್, ವಿಪ್ರೋಗೆ ಭಾರೀ ಹೊಡೆತ ಬೀಳಲಿದೆ.
ಇಂದು ಅಮೆರಿಕ ಸಂಸತ್ ನಲ್ಲಿ ಕ್ಯಾಲಿಫೋರ್ನಿಯಾದ ಸದಸ್ಯ ಝೋಯೆ ಲೋಫ್ ಗ್ರೆನ್, 2017ನೇ ಸಾಲಿನ ‘ಹೈ ಸ್ಕಿಲ್ಡ್ ಇಂಟಗ್ರಿಟಿ ಅಂಡ್ ಫೇರ್ ನೆಸ್’ ಕಾಯ್ದೆಯನ್ನು ಮಂಡಿಸಿದರು. ಈ ಹೊಸ ಮಸೂದೆ ಪ್ರಕಾರ, ಯಾವುದೇ ಕಂಪನಿ ಇರಲಿ ಅವರು ಮಸೂದೆಯಲ್ಲಿ ನಿಗದಿಪಡಿಸಿದ್ದಕ್ಕಿಂತ ಕಡಿಮೆ ಸಂಬಳ ಹೊಂದಿರುವವರನ್ನು ಕೆಲಸದಿಂದ ವಜಾ ಮಾಡಬೇಕು ಹಾಗೂ 1, 30, 000 ಲಕ್ಷ ಅಮೆರಿಕನ್ ಡಾಲರ್ ಪಡೆಯುವವರಿಗೆ ಮಾತ್ರ ಎಚ್1 ಬಿ ವೀಸಾ ನೀಡಬೇಕಾಗುತ್ತದೆ. ಇದರಿಂದ ಬೆಂಗಳೂರು ಸೇರಿದಂತೆ ಭಾರತದ ಹಲವಾರು ಅಂತರಾಷ್ಟ್ರೀಯ ಕಂಪನಿಗಳಿಗೆ ಭಾರೀ ಹೊಡೆತ ಬೀಳಲಿದೆ.
