ಜೈಲು ಸೇರಿ 40ಕ್ಕೂ ಹೆಚ್ಚು ದಿನಗಳಾದ ಬಳಿಕ ಗುರ್ಮೀತ್ ಜೈಲಿನ ದಾಲ್-ರೋಟಿಗೆ ಹೊಂದಿಕೊಂಡಿದ್ದಾನೆ. ಆದರೆ, ಜೈಲಿನಲ್ಲಿ ಊಟ ಸರಿ ಸೇರದೆ, ತೂಕವನ್ನೂ ಕಳೆದುಕೊಂಡಿದ್ದಾನೆ.
ಪಾಣಿಪತ್(ಅ.07): ಸುಮಾರು 800 ಎಕರೆ ವಿಸ್ತಾರದ ತನ್ನದೇ ಸಾಮ್ರಾಜ್ಯದಲ್ಲಿ ಐಷಾರಾಮಿ ಜೀವನ ಕಳೆದಿದ್ದ, ಪ್ರಸ್ತುತ ಅತ್ಯಾಚಾರ ಪ್ರಕರಣದಲ್ಲಿ ಸುನಾರಿಯಾ ಜೈಲು ಸೇರಿರುವ ಗುರ್ಮೀತ್ ರಾಮ್ ರಹೀಂ ನಿಧಾನಕ್ಕೆ ಜೈಲೂಟಕ್ಕೆ ಹೊಂದಿಕೊಳ್ಳುತ್ತಿದ್ದಾನೆ.
ಜೈಲು ಸೇರಿ 40ಕ್ಕೂ ಹೆಚ್ಚು ದಿನಗಳಾದ ಬಳಿಕ ಗುರ್ಮೀತ್ ಜೈಲಿನ ದಾಲ್-ರೋಟಿಗೆ ಹೊಂದಿಕೊಂಡಿದ್ದಾನೆ. ಆದರೆ, ಜೈಲಿನಲ್ಲಿ ಊಟ ಸರಿ ಸೇರದೆ, ತೂಕವನ್ನೂ ಕಳೆದುಕೊಂಡಿದ್ದಾನೆ. ಜೈಲು ಸೇರುವಾಗ 90 ಕೆ.ಜಿ.ಯಿದ್ದ ಆತ ಈಗ 84 ಕೆ.ಜಿ.ಗೆ ಇಳಿಕೆಯಾಗಿದ್ದಾನೆ ಎನ್ನಲಾಗಿದೆ. ಆರಂಭದಲ್ಲಿ ಗುರ್ಮೀತ್ ಕಡಿಮೆ ರೊಟ್ಟಿ ತಿನ್ನುತ್ತಿದ್ದ. ಕ್ಯಾಂಟೀನ್‌ನಿಂದ ಹಣ್ಣು ಮತ್ತು ಇತರ ವಸ್ತುಗಳನ್ನು ಕೇಳುತ್ತಿದ್ದ. ಆದರೆ ದಿನಗಳೆಯುತ್ತಿದ್ದಂತೆ, ಊಟಕ್ಕೆ ಹೊಂದಿಕೊಂಡಿದ್ದಾನೆ.
ಜೈಲಿಗೆ ಹೋಗುವಾಗ ಆತನ ಜೈಲು ಖಾತೆಯಲ್ಲಿ 18000 ರು. ಹಾಕಲಾಗಿತ್ತು. ಬಳಿಕ ಆತನನ್ನು ನೋಡಲು ಹೋಗಿದ್ದ ತಾಯಿ, 5000 ರು. ಹಾಕಿದ್ದಾರೆ. ಮದುಮೇಹ ಮತ್ತು ರಕ್ತದೊತ್ತಡಕ್ಕೆ ಆತನಿಗೆ ಔಷಧ ನೀಡಲಾಗುತ್ತಿದೆ. ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಗುತ್ತಿದೆ.
