ಘಟನೆಯ ಸಾಕ್ಷಿಯಾಗಿರುವ ವರದಿಗಾರ ಫೈಸಲ್ ಜಲಂದ್ ಹೇಳುವ ಪ್ರಕಾರ ಮೂವರು ದುಷ್ಕರ್ಮಿಗಳು ಟಿವಿ ಸ್ಟೇಷನ್'ನ ಹೊರಗೆ ಸೆಕ್ಯೂರಿಕಟಿ ಗಾರ್ಡ್ ಮೇಲೆ ಗುಂಡು ಹೊಡೆದು ಗಾಯಗೊಳಿಸಿ ಒಳಗೆ ಪ್ರವೇಶಿಸಿದ್ದಾಋಎ. ಒಳಬರುತ್ತಲೇ ಮನಸೋಯಿಚ್ಛೆ ಗುಂಡು ಮತ್ತು ಗ್ರೆನೇಡ್ ದಾಳಿ ಮಾಡಿದ್ದಾರೆ. ವಾಹಿನಿಯ ಸಿಬ್ಬಂದಿಯು ಈಗಲೂ ಉಗ್ರರ ಜೊತೆ ಕಟ್ಟಡದಲ್ಲಿ ಸಿಲುಕಿಕೊಂಡಿದ್ದಾರೆ.
ಕಾಬೂಲ್(ನ. 07): ಆಫ್ಘಾನಿಸ್ತಾನದಲ್ಲಿ ಟಿವಿ ಚಾನೆಲ್'ವೊಂದರ ಕಚೇರಿ ಮೇಲೆ ದುಷ್ಕರ್ಮಿಗಳು ದಾಳಿ ಎಸಗಿರುವ ಘಟನೆ ವರದಿಯಾಗಿದೆ. ಕನಿಷ್ಠ ಮೂವರು ಬಂದೂಕುಧಾರಿಗಳು ಕಾಬೂಲ್'ನಲ್ಲಿರುವ ಶಂಶದ್ ಟಿವಿ ಸ್ಟೇಷನ್'ಗೆ ಲಗ್ಗೆ ಇಟ್ಟಿದ್ದಾರೆ. ಘಟನೆಯಲ್ಲಿ ಇಬ್ಬರು ಅಥವಾ ಮೂವರಿಗೆ ಗಾಯಗಳಾಗಿವೆ. ದುಷ್ಕರ್ಮಿಗಳು ಈಗಲೂ ಟಿವಿ ಸ್ಟೇಷನ್'ನಲ್ಲೇ ಇದ್ದು, ಅವರನ್ನು ಹಿಡಿಯಲು ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ದಾಳಿ ನಡೆಸಿದ್ದು ಯಾರೆಂಬುದು ಗೊತ್ತಾಗಿಲ್ಲ. ಯಾವ ಉಗ್ರ ಸಂಘಟನೆಯೂ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
ಶಂಶದ್ ಟಿವಿಯು ಪಾಷ್ಟೋ ಭಾಷೆಯ ರಾಷ್ಟ್ರೀಯ ವಾಹಿನಿಯಾಗಿದೆ. ಘಟನೆಯ ಸಾಕ್ಷಿಯಾಗಿರುವ ವರದಿಗಾರ ಫೈಸಲ್ ಜಲಂದ್ ಹೇಳುವ ಪ್ರಕಾರ ಮೂವರು ದುಷ್ಕರ್ಮಿಗಳು ಟಿವಿ ಸ್ಟೇಷನ್'ನ ಹೊರಗೆ ಸೆಕ್ಯೂರಿಕಟಿ ಗಾರ್ಡ್ ಮೇಲೆ ಗುಂಡು ಹೊಡೆದು ಗಾಯಗೊಳಿಸಿ ಒಳಗೆ ಪ್ರವೇಶಿಸಿದ್ದಾಋಎ. ಒಳಬರುತ್ತಲೇ ಮನಸೋಯಿಚ್ಛೆ ಗುಂಡು ಮತ್ತು ಗ್ರೆನೇಡ್ ದಾಳಿ ಮಾಡಿದ್ದಾರೆ. ವಾಹಿನಿಯ ಸಿಬ್ಬಂದಿಯು ಈಗಲೂ ಉಗ್ರರ ಜೊತೆ ಕಟ್ಟಡದಲ್ಲಿ ಸಿಲುಕಿಕೊಂಡಿದ್ದಾರೆ.
