ಪೊಲೀಸ್ ಅಧಿಕಾರಿಯೊಬ್ಬರಿಗೆ ಗುಂಡಿಕ್ಕಿ ಬಂದ ಆಸಾಮಿಯೊಬ್ಬ ತನ್ನ ಸ್ನೇಹಿತೆಯ ಇಬ್ಬರು ಮಕ್ಕಳು ಸೇರಿದಂತೆ ನಾಲ್ಕು ಹಸುಗೂಸುಗಳನ್ನು ಹತ್ಯೆ ಮಾಡಿ ತಾನು ಸಹ ಆತ್ಮಹತ್ಯೆಗೆ ಶರಣಾಗಿದ್ದಾನೆ.  ಮಕ್ಕಳನ್ನು ದಾರುಣವಾಗಿ ಹತ್ಯೆ ಮಾಡಲು ಕಾರಣವೇನು? ಮುಂದೆ ಓದಿ

ಒರ್ಲಾಂಡೋ:  ಪೊಲೀಸ್ ಅಧಿಕಾರಿಯೊಬ್ಬರಿಗೆ ಗುಂಡಿಕ್ಕಿ ಬಂದ ಆಸಾಮಿಯೊಬ್ಬ ತನ್ನ ಸ್ನೇಹಿತೆಯ ಇಬ್ಬರು ಮಕ್ಕಳು ಸೇರಿದಂತೆ ನಾಲ್ಕು ಹಸುಗೂಸುಗಳನ್ನು ಹತ್ಯೆ ಮಾಡಿ ತಾನು ಸಹ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪ್ಲೋರಿಡಾದ ಒರ್ಲಾಂಡೋ ಈ ದಾರುಣ ಘಟನೆಗೆ ಸಾಕ್ಷಿಯಾಗಿದೆ. ಒರ್ಲಾಂಡೋ ಪೊಲೀಸ್ ಆಯುಕ್ತ ಮಧ್ಯರಾತ್ರಿಯೇ ತುರ್ತು ಸುದ್ದಿಗೋಷ್ಠಿ ಕರೆದು ವಿವರ ನೀಡಿದ್ದಾರೆ.

ಸ್ವಯಂ ಘೋಷಿತ ದೇವಮಾನವ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ?

35 ವರ್ಷದ ಗ್ರೇ ವಾಯ್ನೆ ಲಿಂಡ್ಸೆ 1,6,10, ಮತ್ತು 12 ವರ್ಷದ ನಾಲ್ಕು ಮಕ್ಕಳನ್ನು ಹತ್ಯೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗೃಹ ಬಂಧನದಲ್ಲಿದ್ದ ತನ್ನ ಇಬ್ಬರು ಮಕ್ಕಳು ಮತ್ತು ಸ್ನೇಹಿತೆಯ ಇಬ್ಬರು ಮಕ್ಕಳನ್ನು ವಿನಾಕಾರಣ ಹತ್ಯೆ ಮಾಡಿದವ ಕೊನೆಗೂ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವಾಯ್ನೆ ಲಿಂಡ್ಸೆ ಈ ಹಿಂದೆ ಪೊಲೀಸ್ ಇಲಾಖೆಗೆ ಸಂಬಂಧಿಸಿದ ವಿಭಾಗವೊಂದರಲ್ಲಿ ಕೆಲಸ ಮಾಡುತ್ತಿದ್ದ. ಕೆಲಸ ಬಿಟ್ಟಿದ್ದ ಆತನ ಮೇಲೆ ಅನೇಕ ಕಳ್ಳತನದ ಪ್ರಕರಣಗಳಿದ್ದು ಐಷಾರಾಮಿ ಬದುಕಿಗೆ ಮರುಳಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.