ಆಪರೇಷನ್ ಕಮಲಕ್ಕೆ ಬೆದರಿ ಗುಜರಾತ್ ನಿಂದ ಬೆಂಗಳೂರಿಗೆ ಬಂದಿರುವ ಗುಜರಾತ್ ಶಾಸಕರಿಗೆ ತಮ್ಮ ಕ್ಷೇತ್ರದ ಜನರ ಹಿತಾಸಕ್ತಿ ಮುಖ್ಯ ಅನ್ನಿಸುತ್ತಿಲ್ಲ. ಯಾಕಂದ್ರೆ ಗುಜರಾತ್ ನ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿ ಜನರು ಸಂಕಷ್ಟದಲ್ಲಿದ್ರೂ ಕೂಡ ಇತ್ತ ಬೆಂಗಳೂರು ಬಳಿಯಿರುವ ಖಾಸಗಿ ರೆಸಾರ್ಟ್ ನಲ್ಲಿ ಭರ್ಜರಿ ಮೋಜು ಮಸ್ತಿ ನಡೆಯುತ್ತಿದೆ.

ಬೆಂಗಳೂರು(ಆ.02): ಆಪರೇಷನ್ ಕಮಲಕ್ಕೆ ಬೆದರಿ ಗುಜರಾತ್ ನಿಂದ ಬೆಂಗಳೂರಿಗೆ ಬಂದಿರುವ ಗುಜರಾತ್ ಶಾಸಕರಿಗೆ ತಮ್ಮ ಕ್ಷೇತ್ರದ ಜನರ ಹಿತಾಸಕ್ತಿ ಮುಖ್ಯ ಅನ್ನಿಸುತ್ತಿಲ್ಲ. ಯಾಕಂದ್ರೆ ಗುಜರಾತ್ ನ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿ ಜನರು ಸಂಕಷ್ಟದಲ್ಲಿದ್ರೂ ಕೂಡ ಇತ್ತ ಬೆಂಗಳೂರು ಬಳಿಯಿರುವ ಖಾಸಗಿ ರೆಸಾರ್ಟ್ ನಲ್ಲಿ ಭರ್ಜರಿ ಮೋಜು ಮಸ್ತಿ ನಡೆಯುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎತ್ತ ಕಣ್ಣಾಡಿಸಿದ್ರೂ ಪ್ರವಾಹ, ನೆರವಿನ ಹಸ್ತಕ್ಕಾಗಿ ಕಾಯುತ್ತಿರುವ ಜನರು, ಇದು ಗುಜರಾತ್ ನ ಹಲವೆಡೆ ಉಂಟಾದ ಪ್ರವಾಹ ಪರಿಸ್ಥಿತಿಯ ಚಿತ್ರಣ. ಆದ್ರೆ, ಈ ಜನರ ಕಷ್ಟಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ಮಾತ್ರ ಮೋಜು-ಮಸ್ತಿಯಲ್ಲಿ ಬ್ಯೂಸಿಯಾಗಿದ್ದಾರೆ.

ಇವರೆಂಥಾ ಜನನಾಯಕರು

ಗುಜರಾತ್ ನ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿ ಜನತೆ ಕಂಗಾಲಾಗಿದೆ. ಆದ್ರೆ, ಗುಜರಾತ್ ನ ಕಾಂಗ್ರೆಸ್ ಶಾಸಕರು ಮಾತ್ರ ಬಿಜೆಪಿಯ ಆಪರೇಷನ್ ಕಮಲಕ್ಕೆ ಹೆದರಿ ಬೆಂಗಳೂರಿನ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದು, ಮೋಜು ಮಸ್ತಿಯಲ್ಲಿ ಬ್ಯುಸಿಯಾಗಿದ್ದಾರೆ.

ಕಳೆದ ಐದು ದಿನಗಳಿಂದ ಬಿಡದಿ ಬಳಿಿಯಿರುವ ಖಾಸಗಿ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿರುವ ಶಾಸಕರು, ತಮ್ಮ ಕ್ಷೇತ್ರದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯ ಚಿಂತಯಿಲ್ಲದೇ ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಇದರ ಜೊತೆ ಬಗೆ ಬಗೆ ಖಾದ್ಯಗಳನ್ನ ಸವಿಯುತ್ತಾ... ಸಂಜೆ ವೇಳೆ, ಕರೋಕೆ ಮ್ಯೂಸಿಕ್ ಗೆ ಕಿಶೋರ್ ಕುಮಾರ್, ಮುಖೇಶ್, ಮೊದಮದ್ ರಫಿಯವರ ಹಾಡು ಹೇಳುತ್ತಾ ಕುಣಿದು ಕುಪ್ಪಳಿಸುತ್ತಿದ್ದಾರೆ.

ಒಟ್ನಲ್ಲಿ, ಅತ್ತ ಪ್ರವಾಹ ಪರಿಸ್ಥಿತಿಯಿಂದ ಗುಜರಾತ್ ನ ಹಲವೆಡೆ ತತ್ತರಿಸಿ ಹೋಗಿದ್ರೆ. ಇತ್ತ ಕಾಂಗ್ರೆಸ್ ಶಾಸಕರು ಮಾತ್ರ ಏನೂ ಆಗಿಲ್ಲವೆಂಬಂತೆ ಮೋಜು-ಮಸ್ತಿ ಮಾಡ್ತಿರೋದು ನೋಡ್ತಿದ್ರೆ ಇವರ ಕಾಳಜಿ ಏನು ಅನ್ನೋದು ತೋರಿಸುತ್ತೆ.