ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಒಬಿಸಿ ಮೀಸಲಿನ ಶೇ.50ರ ಮಿತಿಯಿಂದಾಚೆಗೆ ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವುದಾಗಿ ಕಾಂಗ್ರೆಸ್ ಹೇಳಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಮೀಸಲಾತಿ ನೀಡುವ ಸಂಬಂಧ ಸೂಕ್ತ ಸಮೀಕ್ಷೆ ನಡೆಸಲಿದೆ. ವಿಧಾನಸಭೆಯಲ್ಲಿ ಮಸೂದೆ ಮಂಡಿಸಿ, ಮೀಸಲಾತಿ ಕಲ್ಪಿಸಲಿದೆ ಎಂದು ಹಾರ್ದಿಕ್ ಪಟೇಲ್ ತಿಳಿಸಿದ್ದಾರೆ.

ಅಹಮದಾಬಾದ್(ನ.22): ಗುಜರಾತಿನಲ್ಲಿ ಅಧಿಕಾರಕ್ಕೆ ಬಂದರೆ ಪ್ರಬಲ ಪಟೇಲ್ ಸಮುದಾಯಕ್ಕೆ ವಿಶೇಷ ವಿಭಾಗದಡಿ ಮೀಸಲಾತಿ ನೀಡಲು ಕಾಂಗ್ರೆಸ್ ಒಪ್ಪಿಗೆ ಸೂಚಿಸಿದೆ. ಇದರ ಬೆನ್ನಲ್ಲೇ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಆ ಪಕ್ಷಕ್ಕೆ ಪಟೇಲ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಅಧಿಕೃತವಾಗಿ ಬೆಂಬಲ ಘೋಷಿಸಿದ್ದಾರೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಒಬಿಸಿ ಮೀಸಲಿನ ಶೇ.50ರ ಮಿತಿಯಿಂದಾಚೆಗೆ ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವುದಾಗಿ ಕಾಂಗ್ರೆಸ್ ಹೇಳಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಮೀಸಲಾತಿ ನೀಡುವ ಸಂಬಂಧ ಸೂಕ್ತ ಸಮೀಕ್ಷೆ ನಡೆಸಲಿದೆ. ವಿಧಾನಸಭೆಯಲ್ಲಿ ಮಸೂದೆ ಮಂಡಿಸಿ, ಮೀಸಲಾತಿ ಕಲ್ಪಿಸಲಿದೆ ಎಂದು ಹಾರ್ದಿಕ್ ಪಟೇಲ್ ತಿಳಿಸಿದ್ದಾರೆ.

ಗುಜರಾತಿನಲ್ಲಿ ಎಸ್ಸಿ, ಎಸ್ಟಿ, ಒಬಿಸಿ ಸಮುದಾಯಕ್ಕೆ ಈಗಾಗಲೇ ಶೇ.49 ಮೀಸಲಾತಿ ನೀಡಲಾಗಿದೆ. ಶೇ.50ಕ್ಕಿಂತ ಹೆಚ್ಚು ಪ್ರಮಾಣದ ಮೀಸಲಾತಿ ನೀಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆಯಲ್ಲಾ ಎಂಬ ಪ್ರಶ್ನೆಗೆ, ಶೇ.50ರ ಮೀಸಲು ಮಿತಿ ಸುಪ್ರೀಂಕೋರ್ಟ್‌'ನ ಸಲಹೆಯಷ್ಟೇ. ಸಂವಿಧಾನದಲ್ಲಿ ಅಂತಹ ಯಾವುದೇ ಮಿತಿ ಇಲ್ಲ. ಶೇ.50ರ ಮಿತಿಯಿಂದಾಚೆಗೂ ಮೀಸಲಾತಿ ನೀಡಬಹುದು ಎಂದು ಸಮರ್ಥಿಸಿಕೊಂಡಿದ್ದಾರೆ.