ಭಾರತೀಯ ಚುನಾವಣಾ ಆಯೋಗವು ಗುಜರಾತ್ ವಿಧಾನಸಭೆಯ ಚುನಾವಣಾ ದಿನಾಂಕಗಳನ್ನಿಂದು ಪ್ರಕಟಿಸಿದೆ.
ನವದೆಹಲಿ: ಭಾರತೀಯ ಚುನಾವಣಾ ಆಯೋಗವು ಗುಜರಾತ್ ವಿಧಾನಸಭೆಯ ಚುನಾವಣಾ ದಿನಾಂಕಗಳನ್ನಿಂದು ಪ್ರಕಟಿಸಿದೆ.
ಗುಜರಾತ್ ವಿಧಾನಸಭೆಗೆ ಡಿ.09 ಹಾಗೂ ಡಿ.14ರಂದು 2 ಹಂತಗಳಲ್ಲಿ ಚುನಾವಣೆ ನಡೆಯಲಿರುವುದು. ಹಾಗೂ ಡಿ. 18ರಂದು ಫಲಿತಾಂಶ ಪ್ರಕಟಿಸಲಾಗುವುದೆಂದು ಚುನಾವಣಾ ಆಯೊಗವು ಹೇಳಿದೆ.
ಹಿಮಾಚಲ ಪ್ರದೇಶದ ಚುನಾವಣಾ ದಿನಗಳನ್ನು 13 ದಿನಗಳ ಹಿಂದೆಯೇ ಪ್ರಕಟಿಸಿದ್ದ ಚುನಾವಣಾ ಆಯೋಗವು ಗುಜರಾತ್ ಚುನಾವಣೆಗಳ ದಿನಾಂಕವನ್ನು ಪ್ರಕಟಿಸಿರಲಿಲ್ಲ.
ಆಯೋಗದ ‘ವಿಳಂಬ’ ನೀತಿಗೆ ಪ್ರತಿಪಕ್ಷಗಳಿಂದ ಭಾರೀ ಟೀಕೆ ವ್ಯಕ್ತವಾಗಿತ್ತು.
