ಕಳೆದ ಮೂರುವರೆ ವರ್ಷಗಳಿಂದ ಒಂದಾದ ಮೇಲೊಂದು ಚುನಾವಣೆಗಳನ್ನು ಗೆಲ್ಲುತ್ತಾ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೋಡಿಗೆ ಇಂದು ಅಗ್ನಿಪರೀಕ್ಷೆಯ ದಿನವಾಗಿದೆ. ಈ ಬಾರಿಯ ಗುಜರಾತ್ ಚುನಾವಣಾ ಕಣದಲ್ಲಿ ಭಾರೀ ಪೈಪೋಟಿ ಏರ್ಪಟ್ಟಿದೆ.
ಗಾಂಧಿನಗರ(ಡಿ.9): ಕಳೆದ ಮೂರುವರೆ ವರ್ಷಗಳಿಂದ ಒಂದಾದ ಮೇಲೊಂದು ಚುನಾವಣೆಗಳನ್ನು ಗೆಲ್ಲುತ್ತಾ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೋಡಿಗೆ ಇಂದು ಅಗ್ನಿಪರೀಕ್ಷೆಯ ದಿನವಾಗಿದೆ. ಈ ಬಾರಿಯ ಗುಜರಾತ್ ಚುನಾವಣಾ ಕಣದಲ್ಲಿ ಭಾರೀ ಪೈಪೋಟಿ ಏರ್ಪಟ್ಟಿದೆ. ಮೋದಿಯ ತವರು ನೆಲದಲ್ಲೇ ಈ ಬಾರಿ ಹಿಂದೆಂದೂ ಕಂಡಿರದ ಪೈಪೋಟಿ ಎದುರಾಗಿದ್ದು, ಮೊದಲ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದೆ.
ಒಟ್ಟು ಗುಜರಾತ್ ರಾಜ್ಯದ 182 ಕ್ಷೇತ್ರಗಳ ಪೈಕಿ 89 ಕ್ಷೇತ್ರಗಳ ಮತದಾರರು ತಮ್ಮ ತೀರ್ಪನ್ನು ಮತ ಪೆಟ್ಟಿಗೆಯಲ್ಲಿ ಇಂದು ಭದ್ರ ಪಡಿಸಲಿದ್ದಾರೆ. ಮುಖ್ಯವಾಗಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಕಬ್ಬಿಣದ ಕಡಲೆಯಾಗಿರುವ ಸೌರಾಷ್ಟ್ರ ಮತ್ತು ಕಛ್ ನ 58 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು ಇಲ್ಲಿ ಯಾವ ಫಲಿತಾಂಶ ಬರುತ್ತದೆ ಎನ್ನುವುದರ ಮೇಲೆ ಬಿಜೆಪಿಯ ಭವಿಷ್ಯ ನಿರ್ಧಾರವಾಗಲಿದೆ.
ಇನ್ನು, ಹಾರ್ದಿಕ್ ಪಟೇಲ್ ಆರಂಭಿಸಿದ್ದ ಮೀಸಲಾತಿ ಆಂದೋಲನ ಎಷ್ಟರಮಟ್ಟಿಗೆ ಬಿಜೆಪಿ ಗೆ ನಷ್ಟ ಉಂಟು ಮಾಡಲಿದೆ ಎನ್ನುವುದು ಕೂಡ ಸ್ಪಷ್ಟವಾಗಲಿದೆ. ಜಿಎಸ್ ಟಿಯಿಂದ ಅತೀ ಹೆಚ್ಚು ತೊಂದರೆಗೆ ಒಳಗಾದ ಸೂರತ್ ನಲ್ಲಿ ಕೂಡ ಚುನಾವಣೆ ನಡೆಯುತ್ತಿದ್ದು ಇಲ್ಲಿನ 12 ಕ್ಷೇತ್ರಗಳು ಕೂಡ ನಿರ್ಣಾಯಕವಾಗಿವೆ.
