ಸತ್ತಿರುವ ಹಸುವಿನ ಚರ್ಮವನ್ನು ಹಳ್ಳಿಯ ಸಮೀಪದಲ್ಲಿಯೇ ತೆಗೆದಿದ್ದಕ್ಕಾಗಿ ದಲಿತ ಮಹಿಳೆ ಹಾಗೂ ಅವರ ಮಗನ ಮೇಲೆ ಮೇಲ್ವರ್ಗದ 15 ಮಂದಿ ಹೊಡೆದಿರುವ ಘಟನೆ ಆನಂದ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

ಗುಜರಾತ್​ (ಆ.15): ಸತ್ತಿರುವ ಹಸುವಿನ ಚರ್ಮವನ್ನು ಹಳ್ಳಿಯ ಸಮೀಪದಲ್ಲಿಯೇ ತೆಗೆದಿದ್ದಕ್ಕಾಗಿ ದಲಿತ ಮಹಿಳೆ ಹಾಗೂ ಅವರ ಮಗನ ಮೇಲೆ ಮೇಲ್ವರ್ಗದ 15 ಮಂದಿ ಹೊಡೆದಿರುವ ಘಟನೆ ಆನಂದ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೃತಪಟ್ಟ ಹಸುವಿಗಾಗಿಯೇ ಮೀಸಲಿಟ್ಟ ಜಾಗದಲ್ಲಿ ಚರ್ಮ ತೆಗೆಯದೇ ಹಳ್ಳಿಯ ಸಮೀಪದಲ್ಲೇ ಹಸುವಿನ ಚರ್ಮ ತೆಗೆಯಲು ಮುಂದಾದಾಗ ಕೆಲವು ಸ್ಥಳೀಯರು ಆಕ್ಷೇಪವೆತ್ತಿದ್ದಾರೆ. ನಿಗದಿತ ಸ್ಥಳಕ್ಕೆ ತೆಗೆದುಕೊಂಡು ಹೋಗಲು ಸೂಚಿಸಿದ್ದಾರೆ. ಆಗ ಆ ವ್ಯಕ್ತಿ ಮುಂದಿನ ಸಲ ಈ ರೀತಿ ಮಾಡುವುದಿಲ್ಲ ಎಂದು ಒಪ್ಪಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದು ಸ್ಥಳೀಯರು ಆ ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಆರೋಪಿಗಳ ಮೇಲೆ ಎಫ್’ಐಆರ್ ದಾಖಲಿಸಲಾಗಿದ್ದು ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ವರದಿಯಾಗಿದೆ.