ಬೆಂಗಳೂರು (ಜ.12):  ವಿಭಿನ್ನ ಮದುವೆ ಆಮಂತ್ರಣಗಳನ್ನೂ ನೀವು ನೋಡೇ ಇರುತ್ತೀರಿ. ಆದರೆ, ಸೂರತ್‌ನ ಜೋಡಿಯೊಂದು ಆಮಂತ್ರಣದಲ್ಲಿ ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದವನ್ನು ಸಮರ್ಥಿಸಿಕೊಂಡಿದೆ.

ಯುವರಾಜ್‌ ಹಾಗೂ ಸಾಕ್ಷಿ ಎಂಬ ಜೋಡಿ ಜ.22ರಂದು ವಿವಾಹ ಆಗುತ್ತಿದ್ದು, ಮೊದಲ ಪುಟದಲ್ಲಿ ಈ ಕುರಿತಾದ ವಿವರಗಳಿವೆ. ಎರಡನೇ ಪುಟದಲ್ಲಿ ‘ಶಾಂತವಾಗಿರಿ ಮತ್ತು ಮೋದಿಯನ್ನು ನಂಬಿ’ ಎಂಬ ಶೀರ್ಷಿಕೆ ಅಡಿ ರಫೇಲ್‌ ಒಪ್ಪಂದವನ್ನು ಸಮರ್ಥಿಸುವ 9 ಅಂಶಗಳನ್ನು ನೀಡಲಾಗಿದೆ.