1986ರಲ್ಲಿ ನಡೆದ ಬೊಪೋರ್ಸ್ ಹಗರಣದ ಅಸಲಿ ಮುಖವನ್ನು ರಿಪಬ್ಲಿಕ್ ಟಿವಿ ಬಯಲಿಗೆಳೆದಿದೆ. ಈ ಕುರಿತು ರಿಪಬ್ಲಿಕ್ ಟಿವಿ ವರದಿಗಾರ್ತಿ ಪ್ರೇಮಾ ಶ್ರಿದೇವಿ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಭಾರತೀಶ ಮಾಧವ ಸಿನ್ಹಾ ಸೋಲಾಂಕಿ ಅವರ ಸಂದರ್ಶನ ನಡೆಸಿದ್ದರು.
ಗಾಂಧಿನಗರ(ಅ.17): ಬೊಪೋರ್ಸ್ ಹಗರಣದ ಕುರಿತು ಪ್ರಶ್ನೆ ಕೇಳಿದ್ದಕ್ಕೆ ರಿಪಬ್ಲಿಕ್ ಟಿವಿ ವರದಿಗಾರ್ತಿ ಮೇಲೆ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಭಾರತೀಶ ಮಾಧವಸಿನ್ಹಾ ಸೋಲಾಂಕಿ ಧಮ್ಕಿ ಹಾಕಿ ಹಲ್ಲೆ ನಡೆಸಿದ್ದಾರೆ.
1986ರಲ್ಲಿ ನಡೆದ ಬೊಪೋರ್ಸ್ ಹಗರಣದ ಅಸಲಿ ಮುಖವನ್ನು ರಿಪಬ್ಲಿಕ್ ಟಿವಿ ಬಯಲಿಗೆಳೆದಿದೆ. ಈ ಕುರಿತು ರಿಪಬ್ಲಿಕ್ ಟಿವಿ ವರದಿಗಾರ್ತಿ ಪ್ರೇಮಾ ಶ್ರಿದೇವಿ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಭಾರತೀಶ ಮಾಧವ ಸಿನ್ಹಾ ಸೋಲಾಂಕಿ ಅವರ ಸಂದರ್ಶನ ನಡೆಸಿದ್ದರು. ಹಗರಣದ ಕುರಿತು ಪ್ರಶ್ನೆಗಳನ್ನು ಕೇಳಿದಾಗ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಸೋಲಂಕಿ, ವರದಿಗಾರ್ತಿ ಪ್ರೇಮಾ ಶ್ರೀದೇವಿಗೆ ಧಮ್ಕಿ ಹಾಕಿದ್ದಾರೆ. ಅಷ್ಟೇ ಅಲ್ಲ. ಜೊತೆಗಿದ್ದ ಕಾಂಗ್ರೆಸ್ ಮುಖಂಡರು ವರದಿಗಾರ್ತಿ ಮೇಲೆ ಹಲ್ಲೆ ನಡೆಸಿ ಸಂದರ್ಶನ ಪೂಟೇಜ್ ಅನ್ನು ಡಿಲೀಟ್ ಮಾಡಿ ಹೊರ ಹೋಗುವಂತೆ ದೌರ್ಜನ್ಯ ಮೆರದಿದ್ದಾರೆ.
