12ನೇ ಕ್ಲಾಸಿನ ವಾಣಿಜ್ಯ ವಿಷಯದಲ್ಲಿ ಟಾಪರ್‌ ಆಗುವ ವಿದ್ಯಾರ್ಥಿ ತಾನು ಮುಂದೆ ಲೆಕ್ಕಪರಿಶೋಧಕ (ಸಿಎ) ಅಗುತ್ತೇನೆ ಅಥವಾ ಇನ್ನಾವುದೋ ಉನ್ನತ ಹುದ್ದೆ ಏರುತ್ತೇನೆ ಎಂಬ ಅಭಿಲಾಷೆ ಹೊಂದುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ವಿದ್ಯಾರ್ಥಿ ಸಾಂಸಾರಿಕ ಜೀವನವನ್ನೇ ಬಿಟ್ಟು ಜೈನ ಸನ್ಯಾಸಿಯಾಗಲು ಹೊರಟಿದ್ದಾನೆ!

ಅಹಮದಾಬಾದ್‌(ಜೂ.08): 12ನೇ ಕ್ಲಾಸಿನ ವಾಣಿಜ್ಯ ವಿಷಯದಲ್ಲಿ ಟಾಪರ್‌ ಆಗುವ ವಿದ್ಯಾರ್ಥಿ ತಾನು ಮುಂದೆ ಲೆಕ್ಕಪರಿಶೋಧಕ (ಸಿಎ) ಅಗುತ್ತೇನೆ ಅಥವಾ ಇನ್ನಾವುದೋ ಉನ್ನತ ಹುದ್ದೆ ಏರುತ್ತೇನೆ ಎಂಬ ಅಭಿಲಾಷೆ ಹೊಂದುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ವಿದ್ಯಾರ್ಥಿ ಸಾಂಸಾರಿಕ ಜೀವನವನ್ನೇ ಬಿಟ್ಟು ಜೈನ ಸನ್ಯಾಸಿಯಾಗಲು ಹೊರಟಿದ್ದಾನೆ!

ಹೌದು.. ಈತನ ಹೆಸರು ವರ್ಷಿಲ್‌ ಶಾ. ಈತ 12ನೇ ತರಗತಿಯ ಕಾಮರ್ಸ್‌ ವಿಷಯದಲ್ಲಿ ಕಳೆದ ಮೇ 27ರಂದಷ್ಟೇ ಶೇ.99.9 ಅಂಕ ಪಡೆದು ಟಾಪರ್‌ ಆಗಿ ಹೊರಹೊಮ್ಮಿದ್ದ. ಆದರೆ ಇದೇ ವೇಳೆ ಈತ ಎಲ್ಲ ಲೌಕಿಕ ಜೀವನ, ಐಭೋಗಗಳನ್ನು ತೊರೆದು ಜೈನ ಸನ್ಯಾಸಿಯಾಗುವುದಾಗಿ ಘೋಷಿಸಿದ್ದಾನೆ. ಜೂನ್‌ 8ರಂದು ಕಲ್ಯಾಣರತ್ನ ವಿಜಯಜೀ ಮಹಾರಾಜ್‌ ಅವರ ಸಮ್ಮುಖದಲ್ಲಿ ವರ್ಷಿಲ್‌ ಶಾ ಸೂರತ್‌ನಲ್ಲಿ ಜೈನ ಸನ್ಯಾಸ ದೀಕ್ಷೆ ಪಡೆಯಲಿದ್ದಾನೆ. ತಮ್ಮ ಏಕೈಕ ಮಗನ ನಿರ್ಧಾರಕ್ಕೆ ತಂದೆ-ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ. ತಂದೆ ಜಿಗರ್‌ಭಾಯಿ ಆದಾಯ ತೆರಿಗೆ ಅಧಿಕಾರಿಯಾಗಿದ್ದಾರೆ.