ಗುಜರಾತ್ ಕತ್ತೆಗಳನ್ನು ಪ್ರಮೋಟ್ ಮಾಡದಿರಿ ಎಂದು ಪ್ರಧಾನಿ ಮೋದಿಯವರ ಮೇಲೆ ನಿಂದನಾತ್ಮಕವಾಗಿ  ಹೇಳಿಕೆ ನೀಡಿದ ಅಖಿಲೇಶ್ ಯಾದವ್ ಗೆ ಗುಜರಾತ್ ಬಿಜೆಪಿ ನಾಯಕರು ಟಾಂಗ್ ನೀಡಿದ್ದಾರೆ.

ನವದೆಹಲಿ (ಫೆ.21): ಗುಜರಾತ್ ಕತ್ತೆಗಳನ್ನು ಪ್ರಮೋಟ್ ಮಾಡದಿರಿ ಎಂದು ಪ್ರಧಾನಿ ಮೋದಿಯವರ ಮೇಲೆ ನಿಂದನಾತ್ಮಕವಾಗಿ ಹೇಳಿಕೆ ನೀಡಿದ ಅಖಿಲೇಶ್ ಯಾದವ್ ಗೆ ಗುಜರಾತ್ ಬಿಜೆಪಿ ನಾಯಕರು ಟಾಂಗ್ ನೀಡಿದ್ದಾರೆ.

ಕತ್ತೆಗಳಿಗೆ ನಿಷ್ಠೆ ಜಾಸ್ತಿ. ಅಖಿಲೇಶ್ ಕತ್ತೆಗಳಿಂದ ಕಲಿಯಬೇಕಾಗಿದೆ ಎಂದು ಬಿಜೆಪಿ ನಾಯಕರು ಜರಿದಿದ್ದಾರೆ. ಉತ್ತರ ಪ್ರದೇಶದಲ್ಲಿ ಅಖಿಲೇಶ್ ಸೋಲುವ ಭೀತಿಯಲ್ಲಿದ್ದಾರೆ. ಆದರೆ ಅದು ಗುಜರಾತ್ ಜನತೆಯನ್ನು ಅವಮಾನ ಮಾಡುವುದಕ್ಕೆ ಇರುವ ಪರವಾನಗಿಯಲ್ಲ ಎಂದು ಹೇಳಿದ್ದಾರೆ.