ಬದಲಾದ ಪದ್ಮಾವತ್ ಚಿತ್ರಕ್ಕೆ ಗುಜರಾತ್, ಮಧ್ಯಪ್ರದೇಶ ನಿಷೇಧ

Gujarat Ban Padmavath Film
Highlights

ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತ್ ಚಿತ್ರದ ಬಿಡುಗಡೆಗೆ ರಾಜಸ್ಥಾನ ಸರ್ಕಾರ ನಿಷೇಧ ಹೇರಿದ ಬಳಿಕ ಇದೀಗ ಗುಜರಾತ್ ಸರ್ಕಾರ ಕೂಡ ನಿಷೇಧ ಹೇರಿದೆ.

ಮುಂಬೈ: ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತ್ ಚಿತ್ರದ ಬಿಡುಗಡೆಗೆ ರಾಜಸ್ಥಾನ ಸರ್ಕಾರ ನಿಷೇಧ ಹೇರಿದ ಬಳಿಕ ಇದೀಗ ಗುಜರಾತ್ ಸರ್ಕಾರ ಕೂಡ ನಿಷೇಧ ಹೇರಿದೆ.

ಇದೇ ವೇಳೆ, ಚಿತ್ರಕ್ಕೆ ನಿಷೇಧ ಹೇರುವ ಬಗ್ಗೆ ಮಧ್ಯಪ್ರದೇಶ ಸಿಎಂ ಶಿವರಾಜ್ ಚೌಹಾಣ್ ಸುಳಿವು ನೀಡಿದ್ದಾರೆ. ಪದ್ಮಾವತಿ ಚಿತ್ರದ ಶೀರ್ಷಿಕೆಯನ್ನು ಪದ್ಮಾವತ್ ಹೆಸರಿನಲ್ಲಿ ಜ.25ರಂದು ಚಿತ್ರ ಬಿಡುಗಡೆಗೆ ಸೆನ್ಸಾರ್ ಮಂಡಳಿ ಅನುಮತಿ ನೀಡಿದೆ. ಆದರೆ, ಚಿತ್ರ ಬಿಡುಗಡೆ ವಿರುದ್ಧ ಕರಣಿ ಸೇನಾ ಕಾರ್ಯಕರ್ತರು ಮುಂಬೈನಲ್ಲಿ ಸೆನ್ಸಾರ್ ಮಂಡಳಿ ಕಚೇರಿ ಎದುರು ಪ್ರತಿಭಟನೆ ಮುಂದುವರಿಸಿದ್ದಾರೆ.

loader