ಗಾಂಧಿನಗರ[ಜು.28]: ಗುಜರಾತ್‌ ವಿಧಾನಸಭೆ 1993ರ ದಾಖಲೆಯೊಂದನ್ನು ಬ್ರೇಕ್‌ ಮಾಡಿದೆ. ದಿನವೊಂದರಲ್ಲಿ 12 ಗಂಟೆ ಒಂಬತ್ತು ನಿಮಿಷಗಳ ಕಾಲ ಕಲಾಪ ನಡೆಸುವ ಮೂಲಕ ವಿಧಾನಸಭೆ ಸದಸ್ಯರು ಈ ಹಿಂದಿನ ದಾಖಲೆಯನ್ನು ಬದಿಗಟ್ಟಿ, ಹೊಸ ಇತಿಹಾಸ ನಿರ್ಮಾಣಕ್ಕೆ ಸಾಕ್ಷಿಯಾದರು.

ಶುಕ್ರವಾರ-ಶನಿವಾರ ನಿರಂತರವಾಗಿ ಚರ್ಚೆಯಲ್ಲಿ ಪಾಲ್ಗೊಂಡಿದ್ದ ವಿಧಾನಸಭೆ ಸದಸ್ಯರನ್ನು ಅಭಿನಂದಿಸಿದ ಸ್ಪೀಕರ್‌, ಈ ಸುದೀರ್ಘ ಕಲಾಪ ಗುಜರಾತ್‌ ವಿಧಾನಸಭೆಯ ಐತಿಹಾಸಿಕ ದಾಖಲೆಯಾಗಿದೆ ಎಂದು ತಿಳಿಸಿದರು. 1993, ಜ.6ರಂದು 12 ಗಂಟೆ ಎಂಟು ನಿಮಿಷಗಳ ಸುದೀರ್ಘ ಕಲಾಪ ಈ ಹಿಂದಿನ ದಾಖಲೆಯಾಗಿತ್ತು. ಶುಕ್ರವಾರ ಬೆಳಗ್ಗೆ 10 ಗಂಟೆಗೆ ಆರಂಭವಾದ ಕಲಾಪ ರಾತ್ರಿ 12.09ರ ತನಕ ನಡೆದಿದ್ದು, ಇದು ದಾಖಲೆಯಾಗಿದೆ.

ಅಷ್ಟೇ ಅಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಆರೋಗ್ಯಕರ ಬೆಳವಣಿಗೆ ಎಂದು ಸ್ಪೀಕರ್‌ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.