ಗಾಂಧೀನಗರ[ಸೆ.11]: ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಸರ್ದಾರ್ ವಲ್ಲಭಬಾಯಿಯವರ ಏಕತಾ ಪ್ರತಿಮೆ ಬಳಿ 30 ಅಡಿ ಎತ್ತರದ ಒಂದು ಡೈನಾಸರ್ ಮೂರ್ತಿಯೊಂದನ್ನೂ ನಿರ್ಮಿಸಲಾಗಿತ್ತು. ಬರೋಬ್ಬರಿ 2 ಕೋಟಿ ವ್ಯಯಿಸಿ ನಿರ್ಮಿಸಲಾಗಿದ್ದ ಮೂರ್ತಿ ಮಾತ್ರ ಸೆಪ್ಟೆಂಬರ್ 8ರಂದು ಮಕಾಡೆ ಮಲಗಿದೆ.

ಹೌದು ಇಲ್ಲಿನ ಸಾಧು ಪಹಾಡಿಯಲ್ಲಿರುವ ನರ್ಮದಾ ನದಿ ತಟದಲ್ಲಿ ನಿರ್ಮಿಸಲಾಗಿದ್ದ ಏಕತ ಪ್ರತಿಮೆಯೊಂದಿಗೆ, ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಗುಜರಾತ್ ಸರ್ಕಾರ ಇನ್ನೂ ಹಲವು ಕಲಾಕೃತಿಗಳನ್ನು ನಿರ್ಮಿಸಿತ್ತು. ಇವುಗಳಲ್ಲಿ ಡೈನಾಸರ್ ಮೂರ್ತಿಯೂ ಒಂದು. ಇದನ್ನು ನಿರ್ಮಿಸಲು ಬರೋಬ್ಬರಿ 1 ತಿಂಗಳು ತಗುಲಿತ್ತು. ಆದರೀಗ ಇದೆಲ್ಲವೂ ವೇಸ್ಟ್ ಆಗಿದೆ.

ದೃಷ್ಟವಶಾತ್ ಮೂರ್ತಿ ಬಿದ್ದಾಗ ಆ ಸ್ಥಳದಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಇನ್ನು ಸರ್ಕಾರ ಇಲ್ಲಿ ಒಂದು ಮ್ಯೂಸಿಯಂ ಹಾಗೂ ಉದ್ಯಾನವನವನ್ನೂ ನಿರ್ಮಿಸಿದೆ ಎಂಬುವುದು ಉಲ್ಲೇಖನೀಯ. ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವುದು ಸರ್ಕಾರ ಉದ್ದೇಶವಾಗಿದೆ.