ಮುಂಬೈ(ಸೆ. 17): ಭಾರತೀಯ ನೌಕಾಪಡೆಗೆ ಮತ್ತಷ್ಟು ಆನೆಬಲ ಬಂದಿದೆ. ಮುಂಬೈನ ಮಡಗಾಂವ್​ ಬಂದರಿನಲ್ಲಿ ಮೊದಲ ಬಾರಿಗೆ ಮೋರ್ಮುಗಾವೋ ಯುದ್ಧನೌಕೆ ಸೇರ್ಪಡೆಯಾಗಿದೆ. ಇಸ್ರೇಲ್ ತಂತ್ರಜ್ಞಾನದ ಸೂಕ್ಷ್ಮ ನಿಗಾ ಕಾರ್ಯಾಚರಣೆ ವ್ಯವಸ್ಥೆ ಇರುವ ಈ ಐಎನ್​ಎಸ್​ ಮೋರ್ಮುಗಾವೋಗೆ ನೌಕಾಪಡೆ ಮುಖ್ಯಸ್ಥ ಸುನೀಲ್​ ಲಂಬಾ ಚಾಲನೆ ನೀಡಿದ್ದಾರೆ. ವಿಶಾಖಪಟ್ಟಣಂ ದರ್ಜೆಯ ನೌಕೆಗಳ ಸಾಲಿನಲ್ಲಿ ನಿರ್ಮಾಣವಾಗಿದ್ದು ವಿಶ್ವದ ಅತ್ಯುತ್ತಮ ಯುದ್ಧನೌಕೆಗಳಲ್ಲೊಂದೆನಿಸಿದೆ.

INS ಮೋರ್ಮುಗಾವೋ ವಿಶೇಷತೆ
* ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸ್ವದೇಶಿಯಾಗಿ ನಿರ್ಮಾಣ.
* ಭಾರತದಲ್ಲಿ ನಿರ್ಮಾಣವಾದ 2ನೇ ಕ್ಷಿಪಣಿ ನಾಶಕ ಯುದ್ಧನೌಕೆ ಇದು
* ವಿಶ್ವದ ಅತ್ಯುತ್ತಮ ಯುದ್ಧನೌಕೆಗಳ ಸಾಲಿನಲ್ಲಿ...
* 7,300 ಟನ್ ಸಾಮರ್ಥ್ಯ
* ಗಂಟೆಗೆ ಸುಮಾರು 56 ಕಿಲೋ ಮೀಟರ್ ವೇಗದಲ್ಲಿ ಚಲಿಸಬಲ್ಲುದು
* ಭೂಮಿಯಿಂದ ಭೂಮಿಗೆ, ಭೂಮಿಯಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿಗಳು ಹಾಗೂ ಆ್ಯಂಟಿ-ಸಬ್'ಮರೀನ್ ರಾಕೆಟ್ ಲಾಂಚರ್'ಗಳು, ಯುದ್ಧದ ಹೆಲಿಕಾಪ್ಟರ್'ಗಳು ಈ ನೌಕೆಯ ಬತ್ತಳಿಕೆಯಲ್ಲಿರುತ್ತವೆ.
* ಇಸ್ರೇಲ್ ತಂತ್ರಜ್ಞಾನದ ಸೂಕ್ಷ್ಮ ನಿಗಾ ಕಾರ್ಯಾಚರಣೆ ವ್ಯವಸ್ಥೆ ಇದೆ
* ಅಪಾಯಕಾರಿ ಮುನ್ಸೂಚನೆ ನೀಡುವ ರಾಡಾರ್ ಇದೆ
* 100 ಕಿ.ಮೀ. ದೂರದವರೆಗೆ ಗುರಿ ಇಟ್ಟು ನಾಶ ಮಾಡುವ ಸಾಮರ್ಥ್ಯ ಹೊಂದಿದೆ
* 29,700 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದೆ
* 2011ರಲ್ಲಿ ಈ ನೌಕೆಯ ನಿರ್ಮಾಣಕ್ಕೆ ಒಪ್ಪಂದವಾಗಿತ್ತು.

ಇನ್ನು ಈ ಮರ್ಮಗೋವಾ ಯುದ್ಧನೌಕೆಯಲ್ಲಿ 50ಮಂದಿ ಅಧಿಕಾರಿಗಳು ಹಾಗೂ 250 ಮಂದಿ ನೌಕಾ ಸಿಬ್ಬಂದಿ ಇರುತ್ತಾರೆ. ಸ್ವಯಂಚಾಲಿತ ಕ್ಷಿಪಣಿ , ಆಕಾಶದಲ್ಲಿನ ಗುರಿಯನ್ನು ಹೊಡೆದುರುಳಿಸುವ ಕ್ಷಿಪಣಿಗಳು ಈ ಯುದ್ಧನೌಕೆಯಲ್ಲಿರಲಿವೆ. ಇಂತಹುದೇ ನಾಲ್ಕು ಕ್ಷಿಪಣಿ ನಾಶಕ ಯುದ್ಧ ನೌಕೆಗಳನ್ನು ನಿರ್ಮಿಸಲು ಭಾರತೀಯ ನೌಕಾಪಡೆ ಉದ್ದೇಶಿಸಿದೆ. ಈ ನೌಕೆ 2020ರ ವೇಳೆಗೆ ಸೇವೆಗೆ ಲಭ್ಯವಾಗಲಿದೆ. ಇದಲ್ಲದೆ 2020-2024ರ ವೇಳೆಗೆ ಈ ರೀತಿಯ ಇನ್ನೂ ನಾಲ್ಕು ನೌಕೆಗಳು ತಯಾರಾಗಲಿವೆ. ಸರಕಾರೀ ಸ್ವಾಮ್ಯದ ಮಜಗಾಂವ್ ಡಾಕ್ ಶಿಪ್'ಬ್ಯುಲ್ಡರ್ಸ್ ಲಿ.(ಎಂಡಿಎಲ್) ಸಂಸ್ಥೆಯು ಈ ನೌಕೆಯನ್ನು ನಿರ್ಮಿಸುತ್ತಿದೆ.

- ವರುಣ್​ ಕಂಜರ್ಪಣೆ, ನ್ಯೂಸ್​ ಡೆಸ್ಕ್​, ಸುವರ್ಣ ನ್ಯೂಸ್​