ಮೇ 17ರಂದು ಮಧ್ಯಾಹ್ನದ ಸಮಯದಲ್ಲಿ ಫ್ಲ್ಯಾಟ್‌ನ ತಮ್ಮ ಕೊಣೆಯಲ್ಲಿ ದಂಪತಿ ಮಲಗಿದ್ದರು. ಈ ವೇಳೆ ಆರೋಪಿಗಳಿಬ್ಬರು ದಂಪತಿ ಮಲಗಿರುವುದನ್ನು ಮೊಬೈಲ್‌ ಮೂಲಕ ಕಿಟಕಿಯಲ್ಲಿ ವೀಡಿಯೋ ಚಿತ್ರೀಕರಣ ಮಾಡಲು ಯತ್ನಿಸಿದ್ದಾರೆ.

ಬೆಂಗಳೂರು: ದಂಪತಿ ಮಲಗಿದ್ದ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿಯನ್ನು ಎಚ್‌ಎಎಲ್‌ ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಜಗದೀಶ್‌ ನಗರದ ನಿವಾಸಿ ಮುತ್ತರಾಜ್‌ (26) ಬಂಧಿತ. ಮತ್ತೊಬ್ಬ ಆರೋಪಿ ಈಶಾನ್ಯ ರಾಜ್ಯದ ಅವಿನಾಶ್‌ (25) ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅವಿನಾಶ್‌ ಈಶಾನ್ಯ ರಾಜ್ಯದವನಾಗಿದ್ದು, ಇಬ್ಬರು ಆರೋಪಿಗಳು ‘ಯಶ್‌' ಏಜೆನ್ಸಿ ಮೂಲಕ ಜಗದೀಶ್‌ ನಗರದಲ್ಲಿರುವ ‘ಆದಿತ್ಯ ಸ್ವೈನೆ' ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಮೇ 17ರಂದು ಮಧ್ಯಾಹ್ನದ ಸಮಯದಲ್ಲಿ ಫ್ಲ್ಯಾಟ್‌ನ ತಮ್ಮ ಕೊಣೆಯಲ್ಲಿ ದಂಪತಿ ಮಲಗಿದ್ದರು. ಈ ವೇಳೆ ಆರೋಪಿಗಳಿಬ್ಬರು ದಂಪತಿ ಮಲಗಿರುವುದನ್ನು ಮೊಬೈಲ್‌ ಮೂಲಕ ಕಿಟಕಿಯಲ್ಲಿ ವೀಡಿಯೋ ಚಿತ್ರೀಕರಣ ಮಾಡಲು ಯತ್ನಿಸಿದ್ದಾರೆ.

ಆರೋಪಿಗಳನ್ನು ಕಂಡ ದಂಪತಿ ಚೀರಾಡಿದ್ದು, ಆರೋಪಿಗಳು ಓಡಿ ಹೋಗಲು ಯತ್ನಿಸಿದ್ದಾರೆ. ನೆರೆಯ ಫ್ಲ್ಯಾಟ್‌ ನಿವಾಸಿಗಳು ಆರೋಪಿಗಳ ಬೆನ್ನಟ್ಟಿಮುತ್ತರಾಜ್‌ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಎಚ್‌ಎಎಲ್‌ ಠಾಣೆಯಲ್ಲಿ ದೂರು ದಾಖಲಾಗಿದೆ.