ಬೆಂಗಳೂರು[ಜು.29]: ಶುಕ್ರವಾರದಂದು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾನವಚನ ಸ್ವೀಕರಿಸಿದ್ದ ಬಿ. ಎಸ್. ಯಡಿಯೂರಪ್ಪ, ಇಂದು ಸೋಮವಾರ ವಿಶ್ವಾಸಮತ ಯಾಚಿಸಿ ಗೆದ್ದಿದ್ದಾರೆ. ಇದರ ಬೆನ್ನಲ್ಲೇ ಹಣಕಾಸು ಮಸೂದೆಯನ್ನೂ ಮಂಡಿಸಿದ್ದು, ಈ ವೇಳೆ ಚರ್ಚೆ ನಡೆಸುವಂತೆ ಕಾಂಗ್ರೆಸ್ ನಾಯಕರು ಒತ್ತಾಯ ಹೇರಿದಾಗ ಜೆಡಿಎಸ್ ನಾಯಕ ಬಿಜೆಪಿ ಪರ ಬ್ಯಾಟಿಂಗ್ ನಡೆಸಿದ್ದಾರೆ.

ವಿಶ್ವಾಸಮತ ಗೆದ್ದ ಯಡಿಯೂರಪ್ಪ: ಧ್ವನಿಮತದ ಮೂಲಕ ಅಂಗೀಕಾರ

ಹೌದು ಧ್ವನಿ ಮತದಲ್ಲಿ ವಿಶ್ವಾಸಮತ ಪಡೆದ ಬಿ. ಎಸ್ ಯಡಿಯೂರಪ್ಪ ಬಳಿಕ ಧನ ವಿನಿಯೋಗ ವಿಧೇಯಕ ಮಂಡಿಸಿದ್ದಾರೆ. ಮೈತ್ರಿ ಸರ್ಕಾರ ರಚಿಸಿದ ಹಣಕಾಸು ಮಸೂದೆಯನ್ನೇ ನಾನು ಮಂಡಿಸುತ್ತೇನೆ. ಅದರಲ್ಲಿ ಒಂದರಕ್ಷರವನ್ನೂ ಬದಲಾಯಿಸುವುದಿಲ್ಲ ಎಂದು ತಾವು ನೀಡಿದ್ದ ಮಾತಿನಂತೆ ಮಸೂದೆ ಬಿಎಸ್‌ವೈ ಮಂಡಿಸಿದ ಬಿಎಸ್‌ವೈ ಇದನ್ನು ಅಂಗೀಕರಿಸುವಂತೆ ಕೇಳಿಕೊಂಡಿದ್ದರು. ಆದರೆ ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಮುಂದಿನ ತಿಂಗಳು ವಿಧಾನಸಭಾ ಕಲಾಪ ಆರಂಭಿಸಿ ಹೊಸ ಮಸೂದೆ ಮಂಡಿಸಿ, ಚರ್ಚೆ ನಡೆಸಿ ಅಂಗೀಕಾರ ಪಡೆಯಿರಿ ಎಂದು ಒತ್ತಾಯಿಸಿದರು.

ಮೈತ್ರಿ ಸರ್ಕಾರದ ಹಣಕಾಸು ವಿಧೇಯಕವೇ ಮಂಡನೆ: ಬಿಎಸ್‌ವೈ

ಆದರೆ ಈ ಸಂದರ್ಭದಲ್ಲಿ ಜೆಡಿಎಸ್‌ ಶಾಸಕ ಜಿ. ಟಿ. ದೇವೇಗೌಡ ಮಧ್ಯ ಪ್ರವೇಶಿಸಿ 'ನಮ್ಮದೇ ಸರ್ಕಾರ ಇದನ್ನು ತಯಾರಿಸಿದ್ದೆವು. ಒಪ್ಪಿಗೆ ಕೊಟ್ರೆ ಕೆಲಸ ಸಲಲಿತವಾಗಿ ನಡೆಯುತ್ತೆ' ಎಂದು ಸ್ಪಷ್ಟನೆ ನೀಡಿ ವಿರೋಧ ವ್ಯಕ್ತಪಡಿಸಿದ ನಾಯಕರನ್ನು ಸುಮ್ಮನಾಗಿಸಿದ್ದಾರೆ. ಹೀಗಾಗಿ ಚರ್ಚೆ ನಡೆಯದೆ ಈ ಮಸೂದೆ ಅಂಗೀಕಾರ ಪಡೆದಿದೆ.