ಇನ್ನು 2 ದಿನ ಕಳೆದರೆ ಇಡೀ ದೇಶದ ಆರ್ಥಿಕ ಪರಿಸ್ಥಿತಿ ತಲೆಕೆಳಗಾಗಲಿದೆ. ದೇಶಾದ್ಯಂತ ಜಾರಿಯಲ್ಲಿದ್ದ ಸುಮಾರು 21 ರೀತಿಯ ತೆರಿಗೆಗಳು ಜುಲೈ 1 ರಿಂದ ಸಂಪೂರ್ಣ ನಿಷೇಧವಾಗಿ, ಏಕರೂಪದ ತೆರಿಗೆ ಜಾರಿಯಾಗ್ತಿದೆ. ಗ್ರಾಹಕರ ಮತ್ತು ದೇಶದ ಆರ್ಥಿಕತೆ ಒಳಿತಿಗಾಗಿ ಕೇಂದ್ರ ಸರ್ಕಾರ GST ಜಾರಿಗೆ ತರ್ತಿದ್ರೆ, ಹೊಸ ನೀತಿಗೆ ಬೆದರಿದ ಕಂಪನಿಗಳು ಮನಸೋ ಇಚ್ಛೆ ಆಫರ್'ಗಳನ್ನು ನೀಡಿ ಗ್ರಾಹಕರ ಹಾದಿ ತಪ್ಪಿಸುತ್ತಿವೆ.

ನವದೆಹಲಿ(ಜೂ.28): ಇನ್ನು 2 ದಿನ ಕಳೆದರೆ ಇಡೀ ದೇಶದ ಆರ್ಥಿಕ ಪರಿಸ್ಥಿತಿ ತಲೆಕೆಳಗಾಗಲಿದೆ. ದೇಶಾದ್ಯಂತ ಜಾರಿಯಲ್ಲಿದ್ದ ಸುಮಾರು 21 ರೀತಿಯ ತೆರಿಗೆಗಳು ಜುಲೈ 1 ರಿಂದ ಸಂಪೂರ್ಣ ನಿಷೇಧವಾಗಿ, ಏಕರೂಪದ ತೆರಿಗೆ ಜಾರಿಯಾಗ್ತಿದೆ. ಗ್ರಾಹಕರ ಮತ್ತು ದೇಶದ ಆರ್ಥಿಕತೆ ಒಳಿತಿಗಾಗಿ ಕೇಂದ್ರ ಸರ್ಕಾರ GST ಜಾರಿಗೆ ತರ್ತಿದ್ರೆ, ಹೊಸ ನೀತಿಗೆ ಬೆದರಿದ ಕಂಪನಿಗಳು ಮನಸೋ ಇಚ್ಛೆ ಆಫರ್'ಗಳನ್ನು ನೀಡಿ ಗ್ರಾಹಕರ ಹಾದಿ ತಪ್ಪಿಸುತ್ತಿವೆ.

ಕೇಂದ್ರ ಸರ್ಕಾರದ ಭಾರೀ ನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ ಜುಲೈ 1ರಿಂದ ದೇಶಾದ್ಯಂತ ಜಾರಿಗೆ ಬರಲಿದೆ. ಇದರಿಂದಾಗಿ ಈವರೆಗೆ ಆಯಾ ರಾಜ್ಯಗಳ ನೀತಿ ನಿಯಮಾನುಸಾರ ಪದಾರ್ಥಗಳ ಮೇಲೆ ವಿಧಿಸುತ್ತಿದ್ದ, ಸುಮಾರು 21 ರೀತಿಯ ತೆರಿಗೆಗಳಿಗೆ ಬ್ರೇಕ್ ಬೀಳಲಿದೆ.. ದೇಶಾದ್ಯಂತ ಏಕ ರೂಪ ತೆರಿಗೆ ವ್ಯವಸ್ಥೆ ಜಾರಿಗೆ ಬರಲಿದೆ. ಈ ನೀತಿಗೆ ಬೆದರಿರುವ ಕೆಲ ಕಂಪನಿಗಳು ತಮ್ಮಲ್ಲಿನ ವಸ್ತುಗಳನ್ನು ಹಳೇ ಬೆಲೆಗೆ ಮಾರಾಟ ಮಾಡಲು ನಾನಾ ಸರ್ಕಸ್ ಮಾಡುತ್ತಿವೆ.

ಜಿಎಸ್​ಟಿ ಬಂದರೆ ಬೆಲೆ ಹೆಚ್ಚಳ ಎಂಬ ವದಂತಿ: ಗ್ರಾಹಕರನ್ನು ಸೆಳೆಯಲು ಆಫರ್'ಗಳ ಸುರಿಮಳೆ

GST ನೀತಿ ಜಾರಿಯಿಂದ ವಸ್ತುಗಳ ಬೆಲೆ ಪ್ರಸ್ತುತ ದರಕ್ಕಿಂತ ಕಡಿಮೆಯಾಗುತ್ತೆ. ಆದ್ರೆ, ತಮ್ಮ ವಸ್ತುಗಳನ್ನ ಹಳೇ ರೇಟಿಗೆ ಮಾರಾಟ ಮಾಡೋದಿಕೆ ಮುಂದಾಗಿರುವ ಮಾರಾಟಗಾರರು, ತಮ್ಮ ದಾಸ್ತಾನಿನಲ್ಲಿರುವ ವಸ್ತುಗಳ ಮೇಲೆ ರಿಯಾಯಿತಿ ಆಫರ್ ನೀಡಿ ಗ್ರಾಹಕರ ಹಾದಿ ತಪ್ಪಿಸ್ತಿವೆ. ಜಿಎಸ್​ಟಿ ಬಂದ್ರೆ ಬೆಲೆ ಹೆಚ್ಚಾಗುತ್ತದೆ ಎಂದು ವದಂತಿ ಹಬ್ಬಿಸಿ, ಹಳೇ ಸ್ಟಾಕ್ ಗಳನ್ನ ಸೇಲ್ ಮಾಡುತ್ತಿವೆ.

ಯಾವುದೇ ವ್ಯಾಪಾರಿ ತನಗೆ ಲಾಭವಿಲ್ಲದೇ ಆಫರ್'ಗಳನ್ನ ನೀಡುವುದಿಲ್ಲ. ಅದಕ್ಕಾಗಿಯೇ ಜಿಎಸ್​ಟಿ ನೀತಿಯನ್ನೇ ಗ್ರಾಹಕರಿಗೆ ತಪ್ಪಾಗಿ ಅರ್ಥೈಸಿ, ಭರ್ಜರಿ ಆಫರ್ ಗಳನ್ನು ನೀಡುವ ಮೂಲಕ ಜುಲೈ ಒಂದರೊಳಗೆ ತನ್ನ ಹಳೇ ಸ್ಟಾಕ್ ಗಳನ್ನ ಖಾಲಿ ಮಾಡಿಕೊಳ್ಳಲು ಕಂಪನಿಗಳು ಮುಂದಾಗಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್ಥಿಕ ತಜ್ಞ ವಿಜಯ್ ರಾಜೇಶ್, ಗ್ರಾಹಕರಿಗೆ ಕಿವಿಮಾತು ಹೇಳಿದ್ದಾರೆ.

ಸರಕು ಮತ್ತು ಸೇವಾ ತೆರಿಗೆ ಗ್ರಾಹಕ ಸ್ನೇಹಿ ನೀತಿಯಾಗಿದೆ. ವಸ್ತುಗಳ ಅಗತ್ಯತೆಯ ಮೇಲೆ ಶೇ. 5, ಶೇ. 12, ಶೇ. 18 ಮತ್ತು ಶೇ. 28 ತೆರಿಗೆ ಜಾರಿಯಾಗ್ತಿದೆ. ಆದರೆ, ಆರ್ಥಿಕ ಸ್ಥಿತಿಯ ಬಗ್ಗೆ ಗ್ರಾಹಕರಲ್ಲಿರುವ ಗೊಂದಲವನ್ನು ಬಂಡವಾಳ ಮಾಡಟಿಕೊಂಡಿರುವ ಮಾರಾಟಗಾರರು, ಹಗಲು ದರೋಡೆಗೆ ಮುಂದಾಗಿದ್ದಾರೆ. ಒಟ್ಟಿನಲ್ಲಿ ವಾಸ್ತವತೆಯನ್ನ ಅರಿತು ಗ್ರಾಹಕರು ಎಚ್ಚೆತ್ತುಕೊಳ್ಳಬೇಕಾಗಿದೆ.