Asianet Suvarna News Asianet Suvarna News

ಜಿಎಸ್‌ಟಿ ಸಂಗ್ರಹದದ ಪ್ರಮಾಣ ಎಷ್ಟು ಲಕ್ಷ ಕೋಟಿ..?

ಪ್ರಸಕ್ತ ಹಣಕಾಸು ವರ್ಷದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ಪ್ರಮಾಣ 13 ಲಕ್ಷ ಕೋಟಿ ರು. ದಾಟಬಹುದು ಎಂದು ಹಣಕಾಸು ಸಚಿವ ಪೀಯೂಷ್ ಗೋಯೆಲ್ ಅದಮ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

gst the target is of 13 lakh crores sayes piyush

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ಪ್ರಮಾಣ 13 ಲಕ್ಷ ಕೋಟಿ ರು. ದಾಟಬಹುದು ಎಂದು ಹಣಕಾಸು ಸಚಿವ ಪೀಯೂಷ್ ಗೋಯೆಲ್ ಅದಮ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಹೆಚ್ಚು ಹೆಚ್ಚು ಜನರು ತೆರಿಗೆ ಜಾಲಕ್ಕೆ ಸೇರ್ಪಡೆಯಾಗುತ್ತಿರುವುದರಿಂದ, ಇ-ವೇ ಬಿಲ್ ವ್ಯವಸ್ಥೆ ಯಶಸ್ವಿಯಾಗಿ ಜಾರಿಯಾಗಿರುವುದರಿಂದ ತೆರಿಗೆ ಸ್ಲ್ಯಾಬ್‌ಗಳ ಪರಿಷ್ಕರಣೆಗೆ ಅವಕಾಶ ಇರಲಿದೆ ಎಂಬ ಹೊಸ ಆಸೆಯನ್ನೂ ಹುಟ್ಟಿಸಿದ್ದಾರೆ. 

ಜಿಎಸ್‌ಟಿ  ದಿವಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಳೆದ ವರ್ಷ ಜುಲೈನಲ್ಲಿ ಜಾರಿಯಾಗಿದ್ದ ಜಿಎಸ್‌ಟಿಯಿಂದ 2017- - 18 ನೇ ಸಾಲಿನಲ್ಲಿ 7.41 ಲಕ್ಷ ಕೋಟಿ ರು. ತೆರಿಗೆ ಸಂಗ್ರಹವಾಗಿತ್ತು. ಮಾಸಿಕ 89 ,885 ಕೋಟಿ ರು. ಆದಾಯ ಬಂದಿತ್ತು. ಪ್ರಸಕ್ತ ವರ್ಷ ಏಪ್ರಿಲ್‌ನಲ್ಲಿ 1.03 ಲಕ್ಷ ಕೋಟಿ ರು.ವರೆಗೂ ಸಂಗ್ರಹವಾಗಿದೆ.

ಸರಾಸರಿ ಮಾಸಿಕ ತೆರಿಗೆ ಸಂಗ್ರಹ 1.10 ಲಕ್ಷ ಕೋಟಿ ರು.ಗೆ ಏರಿ, 13 ಲಕ್ಷ ಕೋಟಿ ರು.ಗಿಂತ ಆದಾಯ ಬರುವ ನಿರೀಕ್ಷೆ ಇದೆ ಎಂದಿದ್ದಾರೆ.

Follow Us:
Download App:
  • android
  • ios