ಇತ್ತೀಚೆಗೆ ಕೆಲವು ವಸ್ತುಗಳ ಮೇಲೆ ಜಿಎಸ್’ಟಿಯನ್ನು ಕಡಿತಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಮಿತ್ರ ಪಕ್ಷ ಶಿವಸೇನೆಯು ಟೀಕಿಸಿದೆ. ಗುಜರಾತ್ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೆಂದ್ರವು ಮತದಾರರನ್ನು ಓಲೈಸಲು ಇಂತಹ ಕ್ರಮಗಳನ್ನು ಕೈಗೊಂಡಿದೆಯೆಂದು ಶಿವಸೇನೆಯು ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಆರೋಪಿಸಿದೆ.

ಮುಂಬೈ: ಇತ್ತೀಚೆಗೆ ಕೆಲವು ವಸ್ತುಗಳ ಮೇಲೆ ಜಿಎಸ್’ಟಿಯನ್ನು ಕಡಿತಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಮಿತ್ರ ಪಕ್ಷ ಶಿವಸೇನೆಯು ಟೀಕಿಸಿದೆ.

ಗುಜರಾತ್ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೆಂದ್ರವು ಮತದಾರರನ್ನು ಓಲೈಸಲು ಇಂತಹ ಕ್ರಮಗಳನ್ನು ಕೈಗೊಂಡಿದೆಯೆಂದು ಶಿವಸೇನೆಯು ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಆರೋಪಿಸಿದೆ.

ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಏಕರೂಪ ತೆರಿಗೆ ವ್ಯವಸ್ಥೆಯನ್ನು ವಿರೋಧಿಸದ್ದರು ಎಂದು ಶಿವಸೇನೆಯು ಹೇಳಿದೆ.

ನೋಟು ಅಮಾನ್ಯ ಕ್ರಮದ ಪೆಟ್ಟಿನಿಂದ ದೇಶದ ಆರ್ಥಿಕತೆ ಇನ್ನೂ ಚೇತರಿಸಿಕೊಂಡಿಲ್ಲ. ಅದಾಗ್ಯೂ ಜಿಎಸ್’ಟಿಯನ್ನು ಜಾರಿಗೊಳಿಸಲಾಯಿತು. ಪರಿಣಾಮವಾಗಿ ಹಣದುಬ್ಬರ ಹೆಚ್ಚಾಗಿದೆ, ಎಂದು ಸಾಮ್ನಾವು ಹೇಳಿದೆ.

ಜಿಎಸ್’ಟಿಯನ್ನು ಕಡಿತಗೊಳಿಸಿರುವುದು ಜನತೆಯ ಗೆಲುವಾಗಿದೆ. ವಾಸ್ತವದಲ್ಲಿ, ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಬೆಲೆ ತೆರುವುದನ್ನು ತಪ್ಪಿಸಲು ಈ ರೀತಿ ಮಾಡಲಾಗಿದೆ ಎಂದು ಅದು ಹೇಳಿದೆ. (ಸಾಂದರ್ಭಿಕ ಚಿತ್ರ)