ಆಧಾರ್‌ ಕಾರ್ಡ್‌ನಲ್ಲಿನ ಯಾವುದೇ ದತ್ತಾಂಶ ಬದಲಾವಣೆಗೆ ವಿಧಿಸುವ ಶುಲ್ಕದ ಮೇಲೆ ಶೇ.18 ಜಿಎಸ್‌ಟಿ ಅನ್ವಯವಾಗಲಿದೆ ಎಂದು ಆಧಾರ್‌ ಪ್ರಾಧಿಕಾರ ತಿಳಿಸಿದೆ.

ನವದೆಹಲಿ: ಆಧಾರ್‌ ಕಾರ್ಡ್‌ನಲ್ಲಿನ ಯಾವುದೇ ದತ್ತಾಂಶ ಬದಲಾವಣೆಗೆ ವಿಧಿಸುವ ಶುಲ್ಕದ ಮೇಲೆ ಶೇ.18 ಜಿಎಸ್‌ಟಿ ಅನ್ವಯವಾಗಲಿದೆ ಎಂದು ಆಧಾರ್‌ ಪ್ರಾಧಿಕಾರ ತಿಳಿಸಿದೆ.

ಇದರಿಂದಾಗಿ ಆಧಾರ್‌ನಲ್ಲಿನ ಮಾಹಿತಿ ಬದಲಾವಣೆ ಮಾಡ ಬಯಸುವವರು ಹೆಚ್ಚಿನ ಮೊತ್ತ ತೆರಬೇಕಾದ ಅನಿವಾರ್ಯತೆ ಎದುರಾಗಿದೆ. ಆಧಾರ್‌ ಕಾರ್ಡ್‌ನಲ್ಲಿರುವ ಹೆಸರು, ವಿಳಾಸ, ಜನ್ಮ ದಿನಾಂಕ, ಮೊಬೈಲ್‌ ಸಂಖ್ಯೆ, ಲಿಂಗ ಮತ್ತು ಇ-ಮೇಲ್‌ ಬದಲಾವಣೆಗಾಗಿ 25 ರು. ವಿಧಿಸಲಾಗುತ್ತದೆ. ಅಲ್ಲದೆ, ಬಯೋಮೆಟ್ರಿಕ್‌ ಅಪ್ಡೇಟ್‌ಗೂ ಇಷ್ಟೇ ಮೊತ್ತ ವಿಧಿಸಲಾಗುತ್ತದೆ.

ಆದರೆ, ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮೊತ್ತಕ್ಕಾಗಿ ಬೇಡಿಕೆಯಿಟ್ಟರೆ, ಗ್ರಾಹಕರು 1947 ಸಂಖ್ಯೆಗೆ ದೂರು ನೀಡಬಹುದು ಎಂದು ತಿಳಿಸಲಾಗಿದೆ. ಆಧಾರ್‌ ನೋಂದಣಿ ಮತ್ತು ಮಕ್ಕಳ ಬಯೋಮೆಟ್ರಿಕ್‌ ಅಪ್ಡೇಟ್‌ ಮಾತ್ರ ಉಚಿತವಾಗಿರಲಿದೆ ಎಂದು ಆಧಾರ್‌ ಪ್ರಾಧಿಕಾರ ತಿಳಿಸಿದೆ.