ಭಾರತದಲ್ಲಿ ಜುಲೈ 1ರಿಂದ ಜಿಎಸ್'ಟಿ ಜಾರಿಗೆ ಬಂದಿದೆ.
ನವದೆಹಲಿ(ಅ.24): ಸರಕು ಮತ್ತು ಸೇವಾ ತೆರಿಗೆ(ಜಿಎಸ್'ಟಿ)ಯಿಂದ ಸೆಪ್ಟೆಂಬರ್ ತಿಂಗಳೊಂದರಲ್ಲೇ 42.91 ಲಕ್ಷ ಮಂದಿಯಿಂದ ಒಟ್ಟು 92,150 ಕೋಟಿ ರುಪಾಯಿ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಇದರಲ್ಲಿ ಕೇಂದ್ರದ ಪಾಲು 14,042 ಕೋಟಿ ರುಪಾಯಿಗಳಾದರೆ, ರಾಜ್ಯದ ಪಾಲು 21,172 ಕೋಟಿ ರುಪಾಯಿಗಳು ಎಂದು ಹಣಕಾಸು ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಒಟ್ಟು ಸಂಯೋಜಿತ ಜಿಎಸ್'ಟಿ 48,948 ಕೋಟಿ ರುಪಾಯಿಗಳಾಗಿದ್ದು, ಅದರಲ್ಲಿ 23,951 ಕೋಟಿ ರುಪಾಯಿ ಆಮದು ತೆರಿಗೆಯಿಂದ ಸಂಗ್ರಹಿಸಿದ್ದಾಗಿದೆ.
ಲಭ್ಯವಿರುವ ದತ್ತಾಂಶಗಳ ಪ್ರಕಾರ ಜುಲೈನಲ್ಲಿ 95 ಸಾವಿರ ಕೋಟಿ, ಆಗಸ್ಟ್'ನಲ್ಲಿ 91 ಸಾವಿರ ಕೋಟಿ ಸಂಗ್ರಹವಾಗಿತ್ತು.
ಭಾರತದಲ್ಲಿ ಜುಲೈ 1ರಿಂದ ಜಿಎಸ್'ಟಿ ಜಾರಿಗೆ ಬಂದಿದೆ.
