ಮತ್ತೊಂದು ಮೈಲಿಗಲ್ಲು ಸಾಧಿಸಿದ ಇಸ್ರೋ : ಜಿಸ್ಯಾಟ್ 6ಎ ಕಕ್ಷೆಗೆ

First Published 29, Mar 2018, 6:27 PM IST
GSAT 6A successfully launched here
Highlights
  • ಶಕ್ತಿಶಾಲಿ ಸಂವಹನ ಉಪಗ್ರಹ ಜಿಸ್ಯಾಟ್-6ಎ ಕಕ್ಷೆಗೆ
  • 2140 ಕೆ.ಜಿ.ಇರುವ ಈ ಉಪಗ್ರಹ, ಅತ್ಯಧಿಕ ಶಕ್ತಿಯ ಎಸ್ ಬ್ಯಾಂಡ್ ಸಂಪರ್ಕ

ಶ್ರೀಹರಿಕೋಟಾ: ಶಕ್ತಿಶಾಲಿ ಸಂವಹನ ಉಪಗ್ರಹ ಜಿಸ್ಯಾಟ್-6ಎಯನ್ನು ಕಕ್ಷೆಗೆ ಸೇರಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ. ಆ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ ಮತ್ತೊಂದು ಮೈಲಿಗಲ್ಲು ಸಾಧಿಸಿದಂತಾಗಿದೆ.

ಇಲ್ಲಿನ ಸತೀಸ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಪಗ್ರಹವನ್ನು ಹೊತ್ತ ಜಿಎಸ್‌ಎಲ್‌ವಿ-ಎಫ್-08 ರಾಕೆಟ್ ನಭಕ್ಕೆ ಚಿಮ್ಮಿತು. 

2140 ಕೆ.ಜಿ.ಇರುವ ಈ ಉಪಗ್ರಹವು, ಅತ್ಯಧಿಕ ಶಕ್ತಿಯ ಎಸ್ ಬ್ಯಾಂಡ್ ಸಂಪರ್ಕ ಹೊಂದಿದೆ.
 

loader