ವಾಟ್ಸಪ್, ಟೆಲಿಗ್ರಾಮ್’ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಸದಸ್ಯರು ಮಾಡುವ ಆಕ್ಷೇಪಾರ್ಹ ಪೋಸ್ಟ್’ಗಳಿಗೆ ಗ್ರೂಪ್’ನ ಅಡ್ಮಿನ್’ಗಳನ್ನು ಹೊಣೆಗಾರರನ್ನಾಗಿ ಮಾಡುವಂತಿಲ್ಲವೆಂದು ದೆಹಲಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ನವದೆಹಲಿ (ಡಿ.21): ವಾಟ್ಸಪ್, ಟೆಲಿಗ್ರಾಮ್’ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಗ್ರೂಪ್ ಅಡ್ಮಿನ್ ಆಗಿರುವವರಿಗೆ ನಿರಾಳರಾಗುವಂತಹ ತೀರ್ಪೊಂದನ್ನು ದೆಹಲಿ ಹೈಕೋರ್ಟ್ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಾಟ್ಸಪ್, ಟೆಲಿಗ್ರಾಮ್’ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಸದಸ್ಯರು ಮಾಡುವ ಆಕ್ಷೇಪಾರ್ಹ ಪೋಸ್ಟ್’ಗಳಿಗೆ ಗ್ರೂಪ್’ನ ಅಡ್ಮಿನ್’ಗಳನ್ನು ಹೊಣೆಗಾರರನ್ನಾಗಿ ಮಾಡುವಂತಿಲ್ಲವೆಂದು ದೆಹಲಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ವಾಟ್ಸಪ್ ಗ್ರೂಪ್ ಒಂದರ ಅಡ್ಮಿನ್ ವಿರುದ್ಧ ಸಲ್ಲಿಸಲಾಗಿದ್ದ ಮಾನಹಾನಿ ದಾವೆಯನ್ನು ವಜಾಗೊಳಿಸಿದ ನ್ಯಾ| ರಾಜೀವ್ ಸಹಾನಿ, ಸದಸ್ಯನೊಬ್ಬನ ಹೇಳಿಕೆಗೆ ಆ ಗ್ರೂಪ್’ನ ಅಡ್ಮಿನ್’ನನ್ನು ಯಾಕೆ ಹೊಣೆಗಾರನನ್ನಾಗಿಸಬೇಕೆಂದು ನನಗರ್ಥವಾಗುತ್ತಿಲ್ಲ., ದಿನಪತ್ರಿಕೆಯಲ್ಲಿ ಪ್ರಕಟವಾದ ಮಾನಹಾನಿಕರ ವರದಿಗೆ ನ್ಯೂಸ್’ಪ್ರಿಂಟ್’ನ ತಯಾರಕನನ್ನು ಹೊಣೆಗಾರನನ್ನಾಗಿಸಿದಂತೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.