ಏಳು ವರ್ಷದಿಂದ ನನ್ನ ಜೀವವೇ ಎಂದು ಪ್ರೀತಿಸಿದ ಯುವಕ ಮದುವೆ ದಿನವೇ ಕೈ ಕೊಟ್ಟು ಹೋಗಿದ್ದಾನೆ. ಪ್ರೇಮಿ ಓಡಿ ಹೋಗಿದ್ದರಿಂದ ಹೊಳೆನರಸೀಪುರದ ಕಲ್ಯಾಣ ಮಂಟಪದಲ್ಲಿ ಇಂದು ನಡೆಯಬೇಕಿದ್ದ ಮದುವೆ ಮುರಿದು ಬಿದ್ದಿದೆ.
ಬೆಂಗಳೂರು (ಡಿ.03): ಏಳು ವರ್ಷದಿಂದ ನನ್ನ ಜೀವವೇ ಎಂದು ಪ್ರೀತಿಸಿದ ಯುವಕ ಮದುವೆ ದಿನವೇ ಕೈ ಕೊಟ್ಟು ಹೋಗಿದ್ದಾನೆ. ಪ್ರೇಮಿ ಓಡಿ ಹೋಗಿದ್ದರಿಂದ ಹೊಳೆನರಸೀಪುರದ ಕಲ್ಯಾಣ ಮಂಟಪದಲ್ಲಿ ಇಂದು ನಡೆಯಬೇಕಿದ್ದ ಮದುವೆ ಮುರಿದು ಬಿದ್ದಿದೆ.
ಇನ್ನು ಪ್ರಿಯಕರ ಕೈಕೊಟ್ಟು ಹೋಗಿದ್ದಕ್ಕೆ ಮನನೊಂದ ಯುವತಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಶಾಂತ್ (ಹೆಸರು ಬದಲಾಯಿಸಲಾಗಿದೆ) ವಂಚನೆ ಮಾಡಿ, ಪರಾರಿಯಾಗಿದ್ದಾನೆ. ಖಾಸಗಿ ಕಂಪನಿಯಲ್ಲಿ ಎಚ್'ಆರ್ ಆಗಿದ್ದ ಬೆಂಗಳೂರು ಮೂಲದ ಸೌಮ್ಯ (ಹೆಸರು ಬದಲಾಯಿಸಲಾಗಿದೆ) ಮೊಬೈಲ್ ಮೂಲಕ ಪರಿಚಯವಾಗಿದ್ದರು. ಇಬ್ಬರು ಏಳು ವರ್ಷದಿಂದ ಲಿವಿಂಗ್ ಟುಗೆದರ್ ಜೀವನ ನಡೆಸುತ್ತಿದ್ದರು. ಇದೀಗ ಮದುವೆ ದಿನ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಲ್ಲ ಎಂಬ ನೆಪವೊಡ್ಡಿ ಮದುವೆಗೆ ಒಲ್ಲೆ ಎಂದು ಸಂದೇಶ ಓಡಿ ಹೋಗಿದ್ದಾನೆ. ಮದುವೆ ಮುರಿದು ಬಿದ್ದಿದೆ.
