ಕುಲಭೂಷಣ್ ಜಾಧವ್ ಗಲ್ಲುಶಿಕ್ಷೆ ಪ್ರಕರಣದ ವಿಚಾರಣೆ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ವಿಚಾರಣೆ ಮುಕ್ತಾಯಗೊಂಡಿದೆ. ಭಾರತದ ಪರ ಹರೀಶ್ ಸಾಲ್ವೆ ವಾದ ಮಂಡಿಸಿದ್ದಾರೆ.

ನವದೆಹಲಿ (ಮೇ.15): ಕುಲಭೂಷಣ್ ಜಾಧವ್ ಗಲ್ಲುಶಿಕ್ಷೆ ಪ್ರಕರಣದ ವಿಚಾರಣೆ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ವಿಚಾರಣೆ ಮುಕ್ತಾಯಗೊಂಡಿದೆ. ಭಾರತದ ಪರ ಹರೀಶ್ ಸಾಲ್ವೆ ವಾದ ಮಂಡಿಸಿದ್ದಾರೆ.

11 ನ್ಯಾಯಾಧೀಶರನ್ನು ಒಳಗೊಂಡ ನ್ಯಾಯಪೀಠವು ಭಾರತದ ಅರ್ಜಿ ವಿಚಾರಣೆ ನಡೆಸಿದೆ. ಪಾಕಿಸ್ತಾನವು ಮಾನವ ಹಕ್ಕನ್ನು ಉಲ್ಲಂಘನೆ ಮಾಡಿದೆ. ಭಾರತೀಯ ಕಾಲಮಾನ 6.30 ಇನ್ನೊಂದು ವಿಚಾರಣೆ ಪ್ರಾರಂಭವಾಗಲಿದೆ.

ಭಾರತದ ವಾದವೇನು?

ಕುಲಭೂಷಣ್ ಜಾಧವ್ ಗಲ್ಲುಶಿಕ್ಷೆಯನ್ನು ರದ್ದುಗೊಳಿಸಬೇಕು. ಪಾಕಿಸ್ತಾನವು ವಿಯೆನ್ನಾ ಶಿಷ್ಚಾಚಾರಗಳನ್ನು ಉಲ್ಲಂಘಿಸಿದೆ. ಪಾಕಿಸ್ತಾನ ಸಾಕ್ಷಿಗಳನ್ನು ಹಂಚಿಕೊಳ್ಳಲು ನಿರಾಕರಿಸಿದೆ. ಜಾಧವ್ ರನ್ನು ಭಾರತದ ರಾಯಭಾರಿಗಳು ಭೇಟಿ ಮಾಡಲು 16 ಬಾರಿ ಕೇಳಿಕೊಂಡರೂ ಪಾಕ್ ನಿರಾಕರಿಸಿದೆ.

ಈ ಪ್ರಕರಣವನ್ನು ಅತೀ ದೊಡ್ಡ ರಾಜತಾಂತ್ರಿಕ ಸಮಸ್ಯೆ ಎನ್ನಲಾಗಿದೆ. 6.30 ಕ್ಕೆ ಪಾಕ್ ವಿಚಾರಣೆ ಪ್ರಾರಂಭವಾಗಲಿದ್ದು ತೀರ್ಪು ಕುತೂಹಲ ಕೆರಳಿಸಿದೆ.