ಮೋಜು ಮಸ್ತಿ ಮಾಡಲು ಹಣಕ್ಕಾಗಿ ಸ್ವಂತ ಅಜ್ಜಿ- ಅಜ್ಜರನ್ನೇ ಹತ್ಯೆ ಮಾಡಿದ ಮೊಮ್ಮಗನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ನ.29): ಮೋಜು ಮಸ್ತಿ ಮಾಡಲು ಹಣಕ್ಕಾಗಿ ಸ್ವಂತ ಅಜ್ಜಿ- ಅಜ್ಜರನ್ನೇ ಹತ್ಯೆ ಮಾಡಿದ ಮೊಮ್ಮಗನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಎಚ್​ಎಎಲ್​ ಬಳಿ ಅಶ್ವಥನಗರಲ್ಲಿ ನಿನ್ನೆ ಬೆಳಕಿಗೆ ಬಂದಿದ್ದ ವೃದ್ಧ ದಂಪತಿ ಕೊಲೆಯನ್ನು ಪೊಲೀಸರು ಭೇದಿಸಿದ್ದು, ಪ್ರಮುಖ ಆರೋಪಿ ಮೃತರ ಮೊಮ್ಮಗ. ಮೃತ ಗೋವಿಂದನ್​, ಸರೋಜಾ ಅವರ ಮೊಮ್ಮಗ ಪ್ರಮೋದ್​, ಆತನ ಸ್ನೇಹಿತರಾದ ಪ್ರವೀಣ್​, ಹಸನ್​ ಬಾಷಾ ಸೇರಿ ಕೊಲೆ ಮಾಡಿದ್ದಾರೆ. ಭಾನುವಾರ ಮಧ್ಯಾಹ್ಮ ಪ್ರಮೋದ ಅಜ್ಜಿ ದೊಣ್ಣೆಯಿಂದ ಹಲ್ಲೆಗೈದು, ತಾತನನ್ನು ಕೊಲೆ ಮಾಡಿದ್ದ. ನಂತರ ಪ್ರಕರಣದಿಂದ ಬಚಾವಾಗಲೂ ಗ್ಯಾಸ್​ ಸಿಲಿಂಡರ್​ ಲೀಕ್​ ಮಾಡಿ, ಮನೆಯನ್ನು ಬೆಂಕಿಗಾಹುತಿ ಮಾಡಲು ಪ್ಲಾನ್​ ಮಾಡಿದ್ದರು. ಆದರೆ ಆರೋಪಿಗಳ ಪ್ಲಾನ್​ ಉಲ್ಟಾ ಹೊಡೆದಿದ್ದು, ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇಂದು ಮಧ್ಯಾಹ್ನ ಯಮಲೂರು ಸಮೀಪ ಹಸನ್​ ಬಾಷಾ ಬಂಧಿಸುವಾಗ ಪೊಲೀಸರ ಮೇಲೆಯೇ ಹಲ್ಲೆ ನಡೆದಿದ್ದು, ಆತ್ಮರಕ್ಷಣೆಗೆ ಪಿಎಸ್​ಐ ಪ್ರಶೀಲಾ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆ ವೇಳೆ ಪೇದೆ ರವಿಗೆ ಗಾಯವಾಗಿದೆ.