ತನ್ನ ಮೇಲೆರಗಿದ ಬೆಕ್ಕನ್ನು ಬರಿಗೈನಲ್ಲೆ ಹತ್ಯೆ ಮಾಡಿದ ಅಜ್ಜಿ!

Grandmother kills rabies-infected bobcat with bare hands after it attacked her
Highlights

ತನ್ನ ಮೇಲೆ ದಾಳಿ ಮಾಡಿದ ರೇಬಿಸ್ ಪೀಡಿತ ಬೆಕ್ಕನ್ನು ಅಜ್ಜಿಯೊಬ್ಬಳು ಬರಿಗೈನಲ್ಲೆ ಹತ್ಯೆ ಮಾಡಿದ್ದಾರೆ. ಮನೆಯ ಉದ್ಯಾನವೊಂದರಲ್ಲಿದ್ದ ಅಜ್ಜಿಯ ಮೇಲೆ ದಾಳಿ ಮಾಡಿದ್ದ ಬೆಕ್ಕನ್ನು ಅಜ್ಜಿಯೇ ಕೊಂದು ಹಾಕಿದ್ದಾರೆ. ಏನಿದು ವಿಚಿತ್ರ ಸುದ್ದಿ ಮುಂದೆ ಓದಿ...

ಅಥೆನ್ಸ್ [ಜೂನ್ 18] ತನ್ನ ಮೇಲೆ ದಾಳಿ ಮಾಡಿದ ರೇಬಿಸ್ ಪೀಡಿತ ಬೆಕ್ಕನ್ನು ಅಜ್ಜಿಯೊಬ್ಬಳು ಬರಿಗೈನಲ್ಲೆ ಹತ್ಯೆ ಮಾಡಿದ್ದಾರೆ. ಮನೆಯ ಉದ್ಯಾನವೊಂದರಲ್ಲಿದ್ದ ಅಜ್ಜಿಯ ಮೇಲೆ ದಾಳಿ ಮಾಡಿದ್ದ ಬೆಕ್ಕನ್ನು ಅಜ್ಜಿಯೇ ಕೊಂದು ಹಾಕಿದ್ದಾರೆ.

46 ವರ್ಷದ  ಡೇ ಡೇ ಫಿಲಿಫ್ಸ್ ಮನೆಯ ಉದ್ಯಾನದಲ್ಲಿ ಸೆಲ್ಫಿಗೆ ಪೋಸ್ ಕೊಡುತ್ತ ನಿಂತಿದ್ದಳು. ಈ ವೇಳೆ ಹತ್ತಿರದಲ್ಲಿ ನಾಯಿ ಬೊಗಳುವುದು ಕೇಳಿದೆ. ಆ ಕಡೆ ಈ ಕಡೆ ನೋಡುವುದರೊಳಗಾಗಿ ಬೆಕ್ಕೊಂದು ಅಜ್ಜಿಯ ಮೇಲೆ ದಾಳಿ ಮಾಡಿದೆ.

ಅಜ್ಜಿಯ ಮುಖದ ಮೇಲೆರೆಗಿದ ಬೆಕ್ಕು ಪರಚಲು ಆರಂಭಿಸಿದೆ.ಈ ವೇಳೆ ಏನು ಮಾಡಬೇಕೆಂದು ತೋಚದ ಅಜ್ಜಿ ಬೆಕ್ಕಿನ ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದಿದ್ದು ದಾಳಿಯಿಂದ ತಪ್ಪಿಸಿಕೊಳ್ಳುವ ಯತ್ನ ಮಾಡಿದ್ದಾಳೆ. ಅಂತಿಮವಾಗಿ ಬೆಕ್ಕು ಅಜ್ಜಿಯಿಂದ ಹತ್ಯೆಯಾಗಿದೆ. ಅಜ್ಜಿಯನ್ನು ಹತ್ತಿರದ ಆಸ್ಪತ್ರೆಗ ದಾಖಲಿಸಲಾಗಿದ್ದು ಮುಖ , ಎದೆ ಮತ್ತು ಕೈ ಭಾಗದಲ್ಲಿ ಪರಚಿದ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೇ ಹತ್ಯೆಯಾದ ಬೆಕ್ಕಿನಲ್ಲಿ ರೇಬಿಸ್ ಸೋಂಕು ಸಹ ಕಂಡು ಬಂದಿದೆ.

loader