ಸಾರ್ವಜನಿಕರು ಕಾರು, ಬೈಕ್, ಬಸ್ ಮೊದಲಾದ ವಾಹನಗಳಿಗೆ ಆಯುಧ ಪೂಜೆ ನೇರವೇರಿಸಿದರು | ವಾಹನಗಳಂತೂ ಬಣ್ಣ ಬಣ್ಣಗಳಿಂದ ಚಿತ್ತಾರ ಮಾಡಿದಂತೆ ಕಾಣಿಸಿಕೊಂಡು ಭರ್ಜರಿ ಆಯುಧ ಪೂಜೆಗೆ ಸಾಕ್ಷಿಯಾದವು

ಶಿವಮೊಗ್ಗ (ಅ.10): ಶಿವಮೊಗ್ಗ ನಗರದೆಲ್ಲೆಡೆ ನಾಡಹಬ್ಬ ದಸರಾ ಸಂಭ್ರಮದ ಆಚರಣೆ ಮನೆ ಮಾಡಿದೆ. ಆಯುಧ ಪೂಜೆಯ ಅಂಗವಾಗಿ ನಗರದ ವಿವಿಧ ಪೊಲೀಸ್ ಠಾಣೆಗಳ ಆವರಣದಲ್ಲಿ ಕಳ್ಳ - ಖದೀಮರಿಗೆ ಪೊಲೀಸರು ರಾಜಾತಿಥ್ಯ ನೀಡಲು ಬಳಸುತ್ತಿದ್ದ ಲಾಠಿ, ದಪ್ಪ ಚರ್ಮದ ಭರ್ಮಪ್ಪ, ಬಂದೂಕು, ವಾಹನಗಳನ್ನು ಶೃಂಗರಿಸಿ ಪೂಜೆಗೆ ಮಾಡಲಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದಲ್ಲಿರುವ ಸಾರ್ವಜನಿಕರು ಕಾರು, ಬೈಕ್, ಬಸ್ ಮೊದಲಾದ ವಾಹನಗಳಿಗೆ ಆಯುಧ ಪೂಜೆ ನೇರವೇರಿಸಿದರು.

ವಾಹನಗಳಂತೂ ಬಣ್ಣ ಬಣ್ಣಗಳಿಂದ ಚಿತ್ತಾರ ಮಾಡಿದಂತೆ ಕಾಣಿಸಿಕೊಂಡು ಭರ್ಜರಿ ಆಯುಧ ಪೂಜೆಗೆ ಸಾಕ್ಷಿಯಾದವು. ಅದರಲ್ಲೂ ಖಾಸಗಿ ಬಸ್ಸುಗಳಂತೂ ಮದುವಣಗಿತ್ತಿಯಂತೆ ಶೃಂಗಾರ ಮಾಡಿಕೊಂಡು ಪ್ರಯಾಣಿಕರನ್ನೇರಿಸಿ ಕೊಂಡು ರಸ್ತೆಗಿಳಿದು ಹಬ್ಬದ ಮೆರಗು ಹೆಚ್ಚಿಸಿದ್ದವು.