ಪ್ರೀತಿ ನೆಪದಲ್ಲಿ ಯುವತಿಯ ಜೊತೆ ಚೆಲ್ಲಾಟ; ಹುಟ್ಟಿದ ಮಗುವನ್ನು ದತ್ತು ಕೊಟ್ಟು ಕೈತೊಳೆದುಕೊಂಡ ಗ್ರಾಪಂ ಸದಸ್ಯ

Gram Panchayath Member Cheated to Girl
Highlights

ಪ್ರೀತಿ ಹೆಸರಲ್ಲಿ ನಾಟಕವಾಡಿ ಯುವತಿ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ ಹೆದ್ದಾರಿಪುರ ಗ್ರಾ.ಪಂ. ಸದಸ್ಯ ಚಂದ್ರಶೇಖರ್​, ಆಕೆ ಗರ್ಭಿಣಿ ಅಂತ ಗೊತ್ತಾದಾಗ ಮತ್ತೊಂದು ನಾಟಕವಾಡಿದ್ದಾನೆ.

ಶಿವಮೊಗ್ಗ (ಜ.23): ಮದುವೆಯಾಗುವುದಾಗಿ ನಂಬಿಸಿ ಗ್ರಾಮ ಪಂಚಾಯ್ತಿ ಸದಸ್ಯನೊಬ್ಬ ಯುವತಿಗೆ ಮೋಸ ಮಾಡಿರುವ ಘಟನೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ಸಮೀಪದ ಮಳವಲ್ಲಿಯಲ್ಲಿ ನಡೆದಿದೆ.

ಪ್ರೀತಿ ಹೆಸರಲ್ಲಿ ನಾಟಕವಾಡಿ ಯುವತಿ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ ಹೆದ್ದಾರಿಪುರ ಗ್ರಾ.ಪಂ. ಸದಸ್ಯ ಚಂದ್ರಶೇಖರ್​, ಆಕೆ ಗರ್ಭಿಣಿ ಅಂತ ಗೊತ್ತಾದಾಗ ಮತ್ತೊಂದು ನಾಟಕವಾಡಿದ್ದಾನೆ. ಕೊನೆಗೆ ಅಕ್ರಮ ಸಂಬಂಧಕ್ಕೆ ಹುಟ್ಟಿದ್ದ ಆ ಮಗುವನ್ನೂ ಬೇರೆಯವರಿಗೆ ದತ್ತು ಕೊಟ್ಟು ಇದೀಗ ಮದುವೆಯಾಗಲು ಒಲ್ಲೆ ಎಂದಿದ್ದಾನೆ. ಹೆದ್ದಾರಿಪುರ ಗ್ರಾ.ಪಂ. ಸದಸ್ಯ ಚಂದ್ರಶೇಖರ್'​ನಿಂದ ವಂಚನೆಗೊಳಗಾದ ಯುವತಿ, ನ್ಯಾಯಕ್ಕಾಗಿ ಮಹಿಳಾ ಠಾಣೆ ಮೆಟ್ಟಿಲೇರಿದ್ದಾಳೆ.

ಬಡ ಕುಟುಂಬದ ಯುವತಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಳು. ಈ ವೇಳೆ ಪರಿಚಯವಾಗಿದ್ದ ಚಂದ್ರಶೇಖರ್​ ಆಕೆಯನ್ನು ಪ್ರೀತಿ ಮಾಡ್ತೀನಿ, ಮದುವೆ ಆಗ್ತೀನಿ ಅಂತ ನಂಬಿಸಿದ್ದಾನೆ. ಆಕೆ ಗರ್ಭಿಣಿ ಮಾಡಿದ್ದಲ್ಲದೆ ಆ ಮಗುವನ್ನು ಬೇರೆಯವರಿಗೆ ದತ್ತು ನೀಡಿ, ತನಗೂ ಆ ಯುವತಿಗೂ ಯಾವುದೇ ಸಂಬಂಧ ಇಲ್ಲ ಅಂತ ಕೈತೊಳೆದುಕೊಂಡಿದ್ದಾನೆ. ಸಾಲದೂ ಅಂತ ಬೇರೆ ಯುವತಿಯ ಜೊತೆಗೆ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದಾನೆ.  ವಿಷಯ ತಿಳಿದ ಯುವತಿ ನ್ಯಾಯಕ್ಕಾಗಿ ಕಣ್ಣೀರಿಡುತ್ತಿದ್ದಾಳೆ.  

loader