ಮುತ್ತಪ್ಪ ರೈ ಅವರ ಹಿನ್ನೆಲೆ ಏನೇ ಇರಬಹುದು. ನನಗೆ ಅದರ ಅಗತ್ಯವಿಲ್ಲ. ನನಗೆ ಅವರ ಸ್ನೇಹ ಬೇಕು.

ಬೆಂಗಳೂರು(ಅ.17): ಜಯ ಕರ್ನಾಟಕ ಸಂಘಟನೆಯವರು ಈ ಹಿಂದೆ ಮೂರ್ನಾಲ್ಕು ಬಾರಿ ನನ್ನನ್ನು ಸಂಪರ್ಕಿಸಿ ಉದ್ಘಾಟ ನೆಗೆ ಮನವಿ ಮಾಡಿದ್ದರು. ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಬಿಡುವಿರಲಿಲ್ಲ. ಆದರೂ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಸ್ನೇಹಕ್ಕಾಗಿ ಈ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಯ ಕರ್ನಾಟಕ ಸಂಘಟನೆ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಂಘಟನೆಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಘಟಕ ಉದ್ಘಾಟಿಸಿದ ಅವರು, ಮುತ್ತಪ್ಪ ರೈ ಅವರ ಹಿನ್ನೆಲೆ ಏನೇ ಇರಬಹುದು. ನನಗೆ ಅದರ ಅಗತ್ಯವಿಲ್ಲ. ನನಗೆ ಅವರ ಸ್ನೇಹ ಬೇಕು. ನಾನು ನೋಡಲು ಸಾಫ್ಟ್ ಆಗಿ ಕಾಣುತ್ತೇನೆ ಅಷ್ಟೇ. ಯಾರು ಏನೇ ಟೀಕೆ ಮಾಡಿದರೂ ನಾನು ಹೆದರುವುದಿಲ್ಲ ಎಂದು ಪರಮೇಶ್ವರ್ ಏರು ದನಿಯಲ್ಲಿ ಹೇಳಿದರು.