Asianet Suvarna News Asianet Suvarna News

ಡಿಕೆಶಿ ಬೆಂಬಲಿಗರಿಗೆ ಭಾರಿ ನಿರಾಸೆ: ಕೆಪಿಸಿಸಿ ಅಧ್ಯಕ್ಷರಾಗಿ ಪರಮೇಶ್ವರ್ ಮುಂದುವರಿಕೆ !

ಪರಮೇಶ್ವರ್ ಅವರು ಮುಂದುವರಿಯಲು ಪಕ್ಷದ ಬೈಲಾ ನೆರವಾಗಲಿದೆ. ಈ ಮೊದಲು ಕಾಂಗ್ರೆಸ್'ನಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಅಧ್ಯಕ್ಷರಾಗಲು 2 ಬಾರಿ ಮಾತ್ರ ಅವಕಾಶವಿತ್ತು. 1998ರಲ್ಲಿ ಎಐಸಿಸಿ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರು 2004ರಲ್ಲಿ 3ನೇ ಬಾರಿ ಪಕ್ಷದ ಮುಂಚೂಣಿ ವಹಿಸಿಕೊಳ್ಳಲು ಪಕ್ಷದ ಬೈಲಾವನ್ನು ತಿದ್ದುಪಡಿ ಮಾಡಲಾಗಿತ್ತು. ಪರಮೇಶ್ವರ್ ಅವರು 3ನೇ ಬಾರಿಗೆ ಮುಂದುವರಿಯಲು ಬೈಲಾ ನೆರವಾಗಲಿದೆ. ಅಲ್ಲದೆ ಪರಮೇಶ್ವರ್​ರನ್ನು ಕೆಪಿಸಿಸಿ ಅಧ್ಯಕ್ಷರಾಗಿ ಮೊದಲ ಅವಧಿಗೆ ನೇಮಿಸಿದ್ದೇ ಸೋನಿಯಾಗಾಂಧಿ. ಯಾವುದೇ ಕಾರಣಕ್ಕೂ ಬದಲಾಯಿಸಲು ಸಾಧ್ಯವಿಲ್ಲ ಎಂದು ರಾಜ್ಯ ನಾಯಕರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.

GP May continue KPCC President
  • Facebook
  • Twitter
  • Whatsapp

ನವದೆಹಲಿ(ಮೇ.29): ಪರಮೇಶ್ವರ್ ಅವರನ್ನೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮುಂದುವರಿಸಲು ಕಾಂಗ್ರೆಸ್ ಹೈಕಮಾಂಡ್ ಆಸಕ್ತಿ ಹೊಂದಿದ್ದು, ಇಂದು ಸಂಜೆಯೊಳಗೆ ಅಧಿಕೃತ ಆದೇಶ ಹೊರಬೀಳಲಿದೆ.

ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ದಲಿತ ಮತಗಳ ಮೇಲೆ ಕಣ್ಣಿಟ್ಟಿರುವ ಕೇಂದ್ರ ಕಾಂಗ್ರೆಸ್ ಮುಖ್ಯಸ್ಥರು ಅಧ್ಯಕ್ಷರ ಬದಲಾವಣೆ ಸಾಹಸಕ್ಜೆ ಕೈಹಾಕಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಪರಮೇಶ್ವರ್ ಅವರನ್ನು ಬದಲಾಯಿಸಿದರೆ ದಲಿತ ಮತಗಳನ್ನು ಕಳೆದುಕೊಳ್ಳುವ ಭೀತಿ ಪಕ್ಷಕ್ಕೆ ಎದುರಾಗಿದೆ.

ಪರಮೇಶ್ವರ್ ಮುಂದುವರಿಕೆಗೆ ರಾಜ್ಯ ನಾಯಕರ ವಿರೋಧವೂ ಇಲ್ಲ. ಅಲ್ಲದೆ ಇವರ ವಿರುದ್ಧ ಯಾವುದೇ ಗಂಭೀರ ಆರೋಪಗಳಿಲ್ಲ. ಸಚಿವ ಸಂಪುಟದಲ್ಲಿ ಇವರು ಸೌಮ್ಯ ಸ್ವಭಾವದ ಮಂತ್ರಿ ಎಂದು ಹೆಸರು ಪಡೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಪರಮೇಶ್ವರ್ ಅವರನ್ನು ಬದಲಾಯಿಸುವುದು ಕಷ್ಟದ ಕೆಲಸವಾಗುತ್ತದೆ. ಪರಂ ಅವರನ್ನು ಬದಲಿಸಿದರೆ ದಲಿತರಿಗೆ ಅನ್ಯಾಯವಾಯ್ತು ಎಂಬ ಕೂಗು ಏಳುವ ಭೀತಿ ಎದುರಾಗುವುದರಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಿದೆ. ಒಬ್ಬರಿಗೆ ಒಂದೇ ಹುದ್ದೆ ಇರುವ ಹಿನ್ನಲೆಯಲ್ಲಿ ಪರಮೇಶ್ವರ್ ಅವರು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ.

ಪರಮೇಶ್ವರ್'ಗೆ ವರವಾದ ಬೈಲಾ

ಪರಮೇಶ್ವರ್ ಅವರು ಮುಂದುವರಿಯಲು ಪಕ್ಷದ ಬೈಲಾ ನೆರವಾಗಲಿದೆ. ಈ ಮೊದಲು ಕಾಂಗ್ರೆಸ್'ನಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಅಧ್ಯಕ್ಷರಾಗಲು 2 ಬಾರಿ ಮಾತ್ರ ಅವಕಾಶವಿತ್ತು. 1998ರಲ್ಲಿ ಎಐಸಿಸಿ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರು 2004ರಲ್ಲಿ 3ನೇ ಬಾರಿ ಪಕ್ಷದ ಮುಂಚೂಣಿ ವಹಿಸಿಕೊಳ್ಳಲು ಪಕ್ಷದ ಬೈಲಾವನ್ನು ತಿದ್ದುಪಡಿ ಮಾಡಲಾಗಿತ್ತು. ಪರಮೇಶ್ವರ್ ಅವರು 3ನೇ ಬಾರಿಗೆ ಮುಂದುವರಿಯಲು ಬೈಲಾ ನೆರವಾಗಲಿದೆ. ಅಲ್ಲದೆ ಪರಮೇಶ್ವರ್​ರನ್ನು ಕೆಪಿಸಿಸಿ ಅಧ್ಯಕ್ಷರಾಗಿ ಮೊದಲ ಅವಧಿಗೆ ನೇಮಿಸಿದ್ದೇ ಸೋನಿಯಾಗಾಂಧಿ. ಯಾವುದೇ ಕಾರಣಕ್ಕೂ ಬದಲಾಯಿಸಲು ಸಾಧ್ಯವಿಲ್ಲ ಎಂದು ರಾಜ್ಯ ನಾಯಕರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.

ಕೆಪಿಸಿಸಿಗೆ 4 ಉಪಾಧ್ಯಕ್ಷರು ಹಾಗೂ ಡಿಕೆಶಿಗೆ ಪ್ರಚಾರ ಸಮಿತಿ ಹೊಣೆ

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ'ಯಾಗಿದ್ದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಮನವೊಲಿಸಲು ಹೈಕಮಾಂಡ್ ಮುಂದಾಗಿದ್ದು,ಮುಂಬರುವ ಚುನಾವಣೆಗೆ ಚುನಾವಣಾ ಪ್ರಚಾರ ಸಮಿತಿ ಹೊಣೆ ವಹಿಸುವ ಸಾಧ್ಯತೆಯಿದೆ. ಈ ಬಗ್ಗೆ ಸ್ವತಃ ನವದೆಹಲಿಯಲ್ಲಿ ಸುವರ್ಣ ನ್ಯೂಸ್'ನೊಂದಿಗೆ ಮಾತನಾಡಿರುವ ಶಿವಕುಮಾರ್, ‘ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ’. ‘ನಾನು ಅಧ್ಯಕ್ಷನಾಗಬೇಕೆಂದು ಕಾರ್ಯಕರ್ತರು ಬಯಸಿದ್ದರು’. ‘ಅಂತಿಮವಾಗಿ ಹೈಕಮಾಂಡ್ ಆದೇಶಕ್ಕೆ ನಾನು ಬದ್ಧ’. ‘ಡಾ.ಪರಮೇಶ್ವರ್ ಮುಂದುವರಿಸಿದರೆ ಸಂತೋಷ’' ಎಂದು  ತಿಳಿಸಿದ್ದಾರೆ. ಹೈದರಾಬಾದ ಕರ್ನಾಟಕ, ಉತ್ತರ ಕರ್ನಾಟಕ, ಹಳೆ ಮೈಸೂರು ಹಾಗೂ ಕರಾವಳಿ ಭಾಗ ಸೇರಿದಂತೆ ಕೆಪಿಸಿಸಿಗೆ 4 ಉಪಾಧ್ಯಕ್ಷರನ್ನು ನೇಮಿಸುವ ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ.

(ಸಾಂದರ್ಭಿಕ ಚಿತ್ರ)

Follow Us:
Download App:
  • android
  • ios