ರಾಜ್ಯದ ವಿವಿಧ ಜಿಲ್ಲೆಗಳು ಸೇರಿ ಮಹಾರಾಷ್ಟ್ರದ ಪುಣೆ, ಕೊಲ್ಹಾಪುರದಲ್ಲಿ ಹಂತಕರಿಗಾಗಿ ಎಸ್'​ಐಟಿ ಶೋಧ ನಡೆಸುತ್ತಿದೆ. ರೌಡಿ ಚಟುವಟಿಕೆ ಹಿನ್ನಲೆಯುಳ್ಳವರ ವಿಚಾರಣೆ ನಡೆಸಿದೆ. ಗೌರಿ ಕುಟುಂಬದವರು, ಸ್ನೇಹಿತರು, ಕಚೇರಿ ಸಿಬ್ಬಂದಿ, ಹೇಳಿಕೆ ಪಡೆದಿರುವ ಶೀಘ್ರದಲ್ಲಿ ಹಂತಕರನ್ನು ಬಂಧಿಸಲಾಗುವುದು ಎಂದು ತಿಳಿಸಿದೆ.

ಬೆಂಗಳೂರು(ನ.05): ಬೆಂಗಳೂರಿನಲ್ಲಿ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದು ಇಂದಿಗೆ 2 ತಿಂಗಳಾಗಿದ್ದು, ಎಸ್'ಐಟಿ ಗೌರಿ ಲಂಕೇಶ್ ಹಂತಕರ ಸ್ಪಷ್ಟ ಸುಳಿವು ದೊರಕಿದೆ.

ಕಳೆದ ಎರಡು ತಿಂಗಳಿಂದ ಹಂತಕರ ಬೆನ್ನು ಬಿದ್ದಿರುವ ಎಸ್'ಐಟಿ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಸ್ಪಷ್ಟ ಸುಳಿವಿನ ಮೇಲೆ ಹಂತಕರಿಗಾಗಿ ಹುಡುಕಾಟ ನಡೆಸುತ್ತಿರುವ ಎಸ್'ಐಟಿ ಶೀಘ್ರದಲ್ಲೇ ಹಂತಕರನ್ನ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದೆ.