ಕೇಂದ್ರ ಸರ್ಕಾರ ನಗದು ರಹಿತ ವಹಿವಾಟು ಉತ್ತೇಜನ ಹಾಗೂ ಕಪ್ಪುಹಣ ಚಲಾವಣೆಯನ್ನು ತಡೆಯುವ ನಿಟ್ಟಿನಲ್ಲಿ  2017ರ ವಿತ್ತ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಬಂಗಾರ ಪ್ರಿಯರು ಬಾಯ್ ಬಿಡುವ ಹಾಗೇ ಮಾಡಿದ್ದು, ಈ ಕಾಯ್ದೆಯ ಮೂಲಕ ನಗದು ವಹಿವಾಟಿಗೆ ಕೇಂದ್ರ ಬ್ರೇಕ್ ಹಾಕಲಿದೆ.

ನವದೆಹಲಿ(ಫೆ.21): ಕೇಂದ್ರ ಸರ್ಕಾರ ನಗದು ರಹಿತ ವಹಿವಾಟು ಉತ್ತೇಜನ ಹಾಗೂ ಕಪ್ಪುಹಣ ಚಲಾವಣೆಯನ್ನು ತಡೆಯುವ ನಿಟ್ಟಿನಲ್ಲಿ 2017ರ ವಿತ್ತ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಬಂಗಾರ ಪ್ರಿಯರು ಬಾಯ್ ಬಿಡುವ ಹಾಗೇ ಮಾಡಿದ್ದು, ಈ ಕಾಯ್ದೆಯ ಮೂಲಕ ನಗದು ವಹಿವಾಟಿಗೆ ಕೇಂದ್ರ ಬ್ರೇಕ್ ಹಾಕಲಿದೆ.

ಕ್ಯಾಶ್​​ ಕೊಟ್ಟರೆ ಗುನ್ನ!: ಸಾಮಾನ್ಯ ಸರಕುಗಳ ಪಟ್ಟಿ ಸೇರಲಿದೆ ಆಭರಣ

2017ರ ಹಣಕಾಸು ಮಸೂದೆ ಅಂಗೀಕಾರವಾದರೆ ಆಭರಣ ಸಾಮಾನ್ಯ ಸರಕುಗಳ ಪಟ್ಟಿ ಸೇರುತ್ತದೆ. 2 ಲಕ್ಷಕ್ಕಿಂತ ಹೆಚ್ಚು ನಗದು ನೀಡಿ ಆಭರಣ ಖರೀದಿಸಿದರೆ ಶೇ 1ರಷ್ಟು ಹೆಚ್ಚುವರಿ ತೆರಿಗೆ ವಸೂಲಿ ಮಾಡಲಿದ್ದು, ಏಪ್ರಿಲ್‌ 1ರಿಂದ ಜಾರಿಗೆ ಬರಲಿದೆ. ಈ ಪಟ್ಟಿಯಲ್ಲಿರುವ ವಸ್ತುಗಳನ್ನು 2 ಲಕ್ಷಕ್ಕಿಂತ ಹೆಚ್ಚು ನಗದು ನೀಡಿ ಖರೀದಿಸಿದರೆ ಅದಕ್ಕೆ ಶೇ 1ರಷ್ಟು ತೆರಿಗೆ ನೀಡಬೇಕಾಗುತ್ತದೆ. ಈವರೆಗೆ 5 ಲಕ್ಷಕ್ಕಿಂತ ಹೆಚ್ಚು ಬೆಲೆಯ ಆಭರಣಗಳನ್ನು ನಗದು ನೀಡಿ ಖರೀದಿಸಿದರೆ ಮಾತ್ರ ಶೇ 1ರಷ್ಟು ಹೆಚ್ಚುವರಿ ತೆರಿಗೆ ನೀಡಬೇಕಿತ್ತು. ಈಗ 3 ಲಕ್ಷಕ್ಕಿಂತ ಹೆಚ್ಚು ನಗದು ವಹಿವಾಟು ನಡೆಸಿದರೆ ನೀವು ಜೈಲಿಗೆ ಹೋಗಬೇಕಾಗುತ್ತದೆ. ಏಪ್ರಿಲ್​ 1ರಿಂದ ಶೇಕಡ 1 ಟಿಸಿಎಸ್ ಪಾವತಿಸಬೇಕಾಗುತ್ತದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 269 ಎಸ್​ಟಿಯಲ್ಲಿ ಸೇರ್ಪಡೆಗೊಳ್ಳಲಿದೆ.

ಸಂಸತ್ತಿನಲ್ಲಿ ಹಣಕಾಸು ಮಸೂದೆ 2017ಕ್ಕೆ ಅಂಗೀಕಾರ ಸಿಕ್ಕಿದ ಕೂಡಲೇ 2017-18ನೇ ಹಣಕಾಸು ವರ್ಷದಲ್ಲಿ ಟಿಸಿಎಸ್ ಅನ್ವಯವಾಗಲಿದೆ. ಭಾರತೀಯರು ಬಂಗಾರ ಪ್ರಿಯರು. ಮದುವೆಯಿಂದ ಹಿಡಿದು ಎಲ್ಲ ಶುಭ ಸಮಾರಂಭಗಳಲ್ಲಿ ಬಂಗಾರದ ಪಾತ್ರ ಇದ್ದೇ ಇರುತ್ತದೆ, ಆದರೆ ಇನ್ನು ಲೆಕ್ಕವಿಲ್ಲದಷ್ಟು ಬಂಗಾರವನ್ನು ಕೂಡಿಟ್ಟುಕೊಳ್ಳುವಂತಿಲ್ಲ. ನಗದು ರಹಿತ ವ್ಯವಹಹಾರಕ್ಕೆ ಈ ನಿಯಮ ಜಾರಿಗೆ ತರುತ್ತಿದೆ.