ಈಗಾಗಲೇ ನ್ಯಾಯಾಲಯದಿಂದ ಅತ್ಯಾಚಾರಿ ಎಂದು ಘೋಷಿಸಲಾಗಿರುವ ಬಾಭಾ ರಾಮ್ ರಹೀಂ ಶಿಕ್ಷೆ ಪ್ರಮಾಣದ ಪ್ರಕಟನೆಗೆ ಕ್ಷಣಗಣನೆ ಆರಂಭವಾಗಿದೆ. ಈ ಮಧ್ಯೆ ಇವರಿಗೆ 3 ವರ್ಷ ಜೈಲಾಗುತ್ತಾ ಅಥವಾ 7 ವರ್ಷ ಜೈಲಾ ಎಂಬ ಪ್ರಶ್ನೆ ಮೂಡಿದೆ. ಇನ್ನು ಅತ್ಯಾಚಾರಿ ಎಂದು ತೀರ್ಪು ನೀಡಿದಂದೇ ಬಾಬಾ ಬೆಂಬಲಿಗರ ಗೂಂಡಾಗಿರಿಯಿಂದ ಮೂರು ರಾಜ್ಯಗಳು ನಲುಗಿದ್ದು, ಇಂದು ಕೂಡಾ ಇಂತಹ ಪರಿಸ್ಥಿತಿ ಎದುರಾಗದಿರಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೇ ಹಿಂಸಾಚಾರಕ್ಕಿಳಿಯುವ ಕಿಡಿಗೇಡಿಗಳಿಗೆ ಕಂಡಲ್ಲಿ ಗುಂಡು ಹೊಡೆಯುವ ಆದೇಶವನ್ನೂ ಹೊರಡಿಸಲಾಗಿದೆ.

ಹರ್ಯಾಣ(ಆ.28): ಈಗಾಗಲೇ ನ್ಯಾಯಾಲಯದಿಂದ ಅತ್ಯಾಚಾರಿ ಎಂದು ಘೋಷಿಸಲಾಗಿರುವ ಬಾಭಾ ರಾಮ್ ರಹೀಂ ಶಿಕ್ಷೆ ಪ್ರಮಾಣದ ಪ್ರಕಟನೆಗೆ ಕ್ಷಣಗಣನೆ ಆರಂಭವಾಗಿದೆ. ಈ ಮಧ್ಯೆ ಇವರಿಗೆ 3 ವರ್ಷ ಜೈಲಾಗುತ್ತಾ ಅಥವಾ 7 ವರ್ಷ ಜೈಲಾ ಎಂಬ ಪ್ರಶ್ನೆ ಮೂಡಿದೆ. ಇನ್ನು ಅತ್ಯಾಚಾರಿ ಎಂದು ತೀರ್ಪು ನೀಡಿದಂದೇ ಬಾಬಾ ಬೆಂಬಲಿಗರ ಗೂಂಡಾಗಿರಿಯಿಂದ ಮೂರು ರಾಜ್ಯಗಳು ನಲುಗಿದ್ದು, ಇಂದು ಕೂಡಾ ಇಂತಹ ಪರಿಸ್ಥಿತಿ ಎದುರಾಗದಿರಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೇ ಹಿಂಸಾಚಾರಕ್ಕಿಳಿಯುವ ಕಿಡಿಗೇಡಿಗಳಿಗೆ ಕಂಡಲ್ಲಿ ಗುಂಡು ಹೊಡೆಯುವ ಆದೇಶವನ್ನೂ ಹೊರಡಿಸಲಾಗಿದೆ.

ರೋಹ್ಟಕ್'ನ ಅಜ್ಞಾತ ಸ್ಥಳವೊಂದರಲ್ಲಿ 15 ಸಾವಿರಕ್ಕೂ ಹೆಚ್ಚು ಬಾಬಾರ ಮಂದಿ ಅವಿತಿದ್ದಾರೆ ಎಂಬ ವಿಚಾರ ಹರ್ಯಾಣ ಸರ್ಕಾರಕ್ಕೆ ಗುಪ್ತಚರ ಇಲಾಖೆಯಿಂದ ತಿಳಿದು ಬಂದಿದೆ. ಹೀಗಾಗಿ ಭಾರೀ ಕಟ್ಟೆಚ್ಚರದ ನಡುವೆಯೂ ಹಿಂಸಾಚಾರ ಭುಗಿಲೇಳುವ ಆತಂಕ ಎದುರಾಗಿದೆ. ಹೀಗಾಗಿ ಭದ್ರತೆಯ ನಡುವೆಯೂ, ನಿಯಮಗಳನ್ನು ಉಲ್ಲಂಘಿಸಿ ಹಿಂಸಾಚಾರಕ್ಕಿಳಿಯುವ ಕಿಡಿಗೇಡಿಗಳಿಗೆ ಕಂಡಲ್ಲಿ ಗುಂಡು ಹಾರಿಸುವ ಆದೇಶವನ್ನೂ ಹೊರಡಿಸಲಾಗಿದೆ. ಒಟ್ಟಾರೆಯಾಗಿ ಬಾಬಾ ಶಿಕ್ಷೆಯ ತೀರ್ಪು ಭಾರೀ ಕುತೂಹಲವಬನ್ನು ಕೆರಳಿಸಿದೆ.