ಸರ್ಕಾರದ ವತಿಯಿಂದಲೇ ಗ್ಲೋಬಲ್‌ ಟೆಂಡರ್‌ ಆಹ್ವಾನಿಸಿ, ವೇಸ್ಟ್‌ ಟು ಎನರ್ಜಿ ಘಟಕಗಳನ್ನು ಅಭಿವೃದ್ಧಿ ಮಾಡುವ ಬಗ್ಗೆ ಪಾಲಿಕೆ ಚಿಂತಿಸಿದೆ. ಕಳೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರೂ ಸಹ ರಾಜ್ಯ ಸರ್ಕಾರದಿಂದ ಯೋಜನೆ ಜಾರಿ ಸಾಧ್ಯವೇ ಎಂಬುದನ್ನು ಪರಿಶೀಲಿಸಲು ತಿಳಿಸಿದ್ದರು.
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಿರುವ 7 ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ‘ಕಸದಿಂದ ಕಾಂಪೋಸ್ಟ್ ಬದಲಿಗೆ ಕಸದಿಂದ ವಿದ್ಯುತ್ ಉತ್ಪಾದನೆ' ಘಟಕಗಳಾಗಿ ಮರು ನಿರ್ಮಾಣ ಮಾಡಲು ರಾಜ್ಯ ಸರ್ಕಾರದ ಮೊರೆ ಹೋಗಲು ಪಾಲಿಕೆ ಚಿಂತನೆ ನಡೆಸಿದೆ.
ಬಿಬಿಎಂಪಿಯು ಇತ್ತೀಚೆಗಷ್ಟೇ 7 ನೂತನ ಘಟಕಗಳನ್ನು ನಿರ್ಮಿಸಿದ್ದು, ಕಸದಿಂದ ಕಾಂಪೋಸ್ಟ್ ಉತ್ಪಾದಿಸುವ ಘಟಕಗಳಾಗಿರುವುದರಿಂದ ದುರ್ವಾಸನೆ ಸಮಸ್ಯೆ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ನಾಗರಿಕರು ಘಟಕಗಳನ್ನು ಮುಚ್ಚುವಂತೆ ಒತ್ತಾಯ ಮಾಡಿ ಪ್ರತಿಭಟನೆ ನಡೆಸುತ್ತಿ ದ್ದಾರೆ. ಇದಕ್ಕೆ ಮುಕ್ತಿ ಹಾಡಲು ಕಸದಿಂದ ವಿದ್ಯುತ್ (ವೇಸ್ಟ್ ಟು ಎನರ್ಜಿ) ಘಟಕಗಳನ್ನಾಗಿ ಪರಿವರ್ತಿಸಲು ಬಿಬಿಎಂಪಿ ಈಗಾಗಲೇ 3 ಬಾರಿ ಟೆಂಡರ್ ಕರೆದಿದ್ದರೂ ಯಾರೊಬ್ಬರೂ ಆಸಕ್ತಿ ತೋರಿಲ್ಲ. ಹೀಗಾಗಿ ಸರ್ಕಾರದ ವತಿಯಿಂದಲೇ ಗ್ಲೋಬಲ್ ಟೆಂಡರ್ ಆಹ್ವಾನಿಸಿ, ವೇಸ್ಟ್ ಟು ಎನರ್ಜಿ ಘಟಕಗಳನ್ನು ಅಭಿವೃದ್ಧಿ ಮಾಡುವ ಬಗ್ಗೆ ಪಾಲಿಕೆ ಚಿಂತಿಸಿದೆ. ಕಳೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರೂ ಸಹ ರಾಜ್ಯ ಸರ್ಕಾರದಿಂದ ಯೋಜನೆ ಜಾರಿ ಸಾಧ್ಯವೇ ಎಂಬುದನ್ನು ಪರಿಶೀಲಿಸಲು ತಿಳಿಸಿದ್ದರು.
ಕನ್ನಡಪ್ರಭ ವಾರ್ತೆ
epaper.kannadaprabha.in
