ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಸಿದ್ಧ, ಯುನಾನಿ ಮತ್ತು ಯೋಗ ವೈದ್ಯ ವೃತ್ತಿ ನಿರತರ ನೋಂದಣಿ ಮತ್ತು ವೈದ್ಯಕೀಯ ವೃತ್ತಿ ನಿರತರ ಸಂಕೀರ್ಣ ಉಪ ಬಂಧಗಳ ತಿದ್ದುಪಡಿ ವಿಧೇಯಕ ಸೇರಿ ಒಟ್ಟೂ5 ವಿಧೇಯ​ಕಗಳನ್ನು ಬುಧವಾರ ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿದೆ. ಆರೋಗ್ಯ ಸಚಿವ ಕೆ.ರಮೇಶಕುಮಾರ್‌ ಈ ವಿಧೇಯಕ ಮಂಡಿಸಿದರು.

ಬೆಳಗಾವಿ (ನ.24): ಇನ್ನು ಮುಂದೆ ಆಯುರ್ವೇದ, ಯುನಾನಿ ವೈದ್ಯರು ಕಡ್ಡಾಯವಾಗಿ ನೋಂದಣಿ ಮಾಡಿ­​ಕೊಂಡು ಗುರುತಿನ ಚೀಟಿ ಪಡೆಯಬೇಕು. ಇಲ್ಲದಿದ್ದಲ್ಲಿ ದಂಡ, ಸೆರೆವಾಸಕ್ಕೂ ಸಿದ್ಧರಾಗಬೇಕು.

ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಸಿದ್ಧ, ಯುನಾನಿ ಮತ್ತು ಯೋಗ ವೈದ್ಯ ವೃತ್ತಿ ನಿರತರ ನೋಂದಣಿ ಮತ್ತು ವೈದ್ಯಕೀಯ ವೃತ್ತಿ ನಿರತರ ಸಂಕೀರ್ಣ ಉಪ ಬಂಧಗಳ ತಿದ್ದುಪಡಿ ವಿಧೇಯಕ ಸೇರಿ ಒಟ್ಟೂ5 ವಿಧೇಯ​ಕಗಳನ್ನು ಬುಧವಾರ ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿದೆ. ಆರೋಗ್ಯ ಸಚಿವ ಕೆ.ರಮೇಶಕುಮಾರ್‌ ಈ ವಿಧೇಯಕ ಮಂಡಿಸಿದರು.

ಆಯುರ್ವೇದ, ಯುನಾನಿ ಹಾಗೂ ಪ್ರಕೃತಿ ಚಿಕಿತ್ಸೆ, ಯೋಗ ವೈದ್ಯರು ನೋಂದಣಿ ಮಾಡಿಕೊಂಡು, ಗುರುತಿನ ಚೀಟಿ ಪಡೆಯ­ಬೇಕು. ಕಾನೂನು ಉಲ್ಲಂಘಿಸಿದಲ್ಲಿ ರೂ.50 ಸಾವಿರದಿಂದ ರೂ.5 ಲಕ್ಷದವರೆಗೆ ದಂಡ ವಿಧಿ­ಸಲು ಈ ವಿಧೇಯಕ ಅಧಿಕಾರ ನೀಡಲಿದೆ. ಜತೆಗೆ ಒಂದು ವರ್ಷ ಕಾರಾಗೃಹ ಶಿಕ್ಷೆಗೆ ಒಳಪಡಿಸಲೂ ಅವಕಾಶ ಇದೆ.