ಖಾತೆಯಲ್ಲಿ ಹಣವೇ ಇಲ್ಲದಿದ್ದರೂ ಚೆಕ್‌ ನೀಡಿದರೆ ಸೀದಾ ಜೈಲಿಗೆ ಹೋಗುತ್ತೀರಿ. ನಿಜ. ಚೆಕ್‌ ಬೌನ್ಸ್‌ ಪ್ರಕರಣಗಳನ್ನು ತಗ್ಗಿಸುವ ಉದ್ದೇಶದಿಂದ ನೆಗೋಷಬಲ್‌ ಇನ್‌ಸ್ಟೂ್ರಮೆಂಟ್ಸ್‌ ಕಾಯ್ದೆಗೆ ಸರ್ಕಾರ ತಿದ್ದುಪಡಿ ತರಲು ಉದ್ದೇಶಿಸಿದೆ.

ನವದೆಹಲಿ: ಖಾತೆಯಲ್ಲಿ ಹಣವೇ ಇಲ್ಲದಿದ್ದರೂ ಚೆಕ್‌ ನೀಡಿದರೆ ಸೀದಾ ಜೈಲಿಗೆ ಹೋಗುತ್ತೀರಿ. ನಿಜ. ಚೆಕ್‌ ಬೌನ್ಸ್‌ ಪ್ರಕರಣಗಳನ್ನು ತಗ್ಗಿಸುವ ಉದ್ದೇಶದಿಂದ ನೆಗೋಷಬಲ್‌ ಇನ್‌ಸ್ಟೂ್ರಮೆಂಟ್ಸ್‌ ಕಾಯ್ದೆಗೆ ಸರ್ಕಾರ ತಿದ್ದುಪಡಿ ತರಲು ಉದ್ದೇಶಿಸಿದೆ.

ಆ ಪ್ರಕಾರ, ಚೆಕ್‌ ಬೌನ್ಸ್‌ ಸಂಬಂಧ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಚೆಕ್‌ ಪಡೆದವರು ಹಾಗೂ ಕೊಟ್ಟವರಿಗೆ ಕಾಲಮಿತಿ ನೀಡಿ, ವ್ಯಾಜ್ಯ ಇತ್ಯರ್ಥಕ್ಕೆ ಅವಕಾಶ ನೀಡಲಾಗುತ್ತದೆ.

ತಪ್ಪಿದರೆ, ಚೆಕ್‌ ನೀಡಿ ದಾತನನ್ನು ಜೈಲಿಗೆ ಕಳುಹಿಸಲಾಗುತ್ತದೆ. ಇದು ಜಾಮೀನುರಹಿತ ಅಪರಾಧವಾಗಿರಲಿದೆ. ಚೆಕ್‌ ನೀಡಿದಾತ ಖಾತೆಗೆ ಹಣ ಠೇವಣಿ ಮಾಡುವವರೆಗೂ ವಾದ ಮಂಡನೆಗೆ ಅವಕಾಶ ಸಿಗುವುದಿಲ್ಲ.