ದೇಶದ ರಕ್ಷಣೆ ವಿಚಾರದಲ್ಲಿ ಮೋದಿ, ಸುಷ್ಮಾ ಸ್ವರಾಜ್ ಆಟವಾಡುತ್ತಿದ್ದಾರೆ: ಕಾಂಗ್ರೆಸ್

First Published 18, Jan 2018, 3:40 PM IST
Govt snoozing as China occupied Doklam Modi Sushma misled nation says  Congress
Highlights

ಚೀನಾ ಸೇನೆ ಡೊಕ್ಲಾಮ್ ಪ್ರದೇಶದಲ್ಲಿ ಮತ್ತೆ ಉದ್ಧಟತನ ತೋರಿದ್ದು, ಮತ್ತೆ ತನ್ನ ಸೇನೆಯನ್ನು ನಿಯೋಜಿಸಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ದೇಶವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ನವದೆಹಲಿ (ಜ.18): ಚೀನಾ ಸೇನೆ ಡೊಕ್ಲಾಮ್ ಪ್ರದೇಶದಲ್ಲಿ ಮತ್ತೆ ಉದ್ಧಟತನ ತೋರಿದ್ದು, ಮತ್ತೆ ತನ್ನ ಸೇನೆಯನ್ನು ನಿಯೋಜಿಸಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ದೇಶವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಉಪಗ್ರಹಗಳು ಕಳುಹಿಸಿರುವ ಫೋಟೋ ಹಾಗೂ ಮಾಧ್ಯಮಗಳ ವರದಿ ಪ್ರಕಾರ ಚೀನಾ ಡೋಕ್ಲಾಮ್ ಪ್ರದೇಶದಲ್ಲಿ ತನ್ನ ಸೇನೆಯನ್ನು ನಿಯೋಜಿಸಿದೆ. ಆದರೂ ಸರಕಾರ ನಿದ್ದೆ ಮಾಡುತ್ತಿದೆ. ಭಾರತದ ಗಡಿ ಭಾಗದಲ್ಲಿರುವ ಡೋಕ್ಲಾಮ್ ಪ್ರದೇಶವನ್ನು ತನ್ನದಾಗಿಸಿಕೊಳ್ಳಲು ಚೀನಾ ಯತ್ನಿಸುತ್ತಿದೆ. ನಮ್ಮ ಗಡಿಯನ್ನು ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.

loader